Thursday, April 17, 2025
Google search engine

Homeರಾಜ್ಯಸುದ್ದಿಜಾಲನಿಗದಿತ ಸಮಯದಲ್ಲಿ ಆಧಾರ್ ನವೀಕರಣ ಸಮಸ್ಯೆ: ಆತಂಕದಲ್ಲಿ ನೀಟ್ ಅಭ್ಯರ್ಥಿಗಳು

ನಿಗದಿತ ಸಮಯದಲ್ಲಿ ಆಧಾರ್ ನವೀಕರಣ ಸಮಸ್ಯೆ: ಆತಂಕದಲ್ಲಿ ನೀಟ್ ಅಭ್ಯರ್ಥಿಗಳು

2024 ರ ಸಾಲಿಗೆ NEET ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಅಭ್ಯರ್ಥಿಯು ಆಧಾರ್ ನವೀಕರಣ ಗೊಳಿಸುವುದು ಕಡ್ಡಾಯ ಎಂದು ಹೇಳಿರುವುದರಿಂದ ಅಭ್ಯರ್ಥಿಗಳು ಆಧಾರ್ ನವೀಕರಣಕ್ಕೆ ಸಲ್ಲಿಕೆ ಮಾಡಿದ್ದು, ಆಧಾರ್ ನವೀಕರಣಕ್ಕೆ 20 ರಿಂದ 30 ದಿನಗಳ ನಿರ್ದಿಷ್ಟ ಅವಧಿಯನ್ನು ಆಧಾರ್ ಪ್ರಾಧಿಕಾರ ಮಾಡಿಕೊಂಡಿದೆ. ಈ ಕಾರಣ ದಿಂದಾಗಿ, ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಆಧಾರ್ ನವೀಕೃತವಾಗದೆ NEET ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಅಭ್ಯರ್ಥಿಗಳು ಮತ್ತು ಪೋಷಕರು ಅತ್ಯಂತ ಆತಂಕದ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.

NEET ಆನ್ಲೈನ್ ಅರ್ಜಿ ಸಲ್ಲಿಸಲು ಮಾರ್ಚ್ 9 2024 ಕಡೆಯ ದಿನವಾಗಿರುವುದರಿಂದ, ಪೋಷಕರು ಮತ್ತು ವಿದ್ಯಾರ್ಥಿಗಳು ನಿತ್ಯವೂ ಆಧಾರ್ ಕೇಂದ್ರ ಕ್ಕೆ ಹೋಗಿ ಆಧಾರ್ ನವೀಕರಣದ ಬಗ್ಗೆ ವಿಚಾರಿಸಿದರೂ ಯಾವುದೇ ಉಪಯೋಗವಾಗಿಲ್ಲ ಎಂದು ಪೋಷಕರು ಅಳಲುತೋಡಿಕೊಂಡಿದ್ದಾರೆ.

ಈ ಸಮಸ್ಯೆಯ ಕುರಿತು ಆಧಾರ್ ಕೇಂದ್ರದ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಇದು ಕಳೆದ 15-20 ದಿನಗಳಿಂದ ಆಧಾರ್ NEET ಅಭ್ಯರ್ಥಿಗಳ ನವೀಕರಣದ ಕುರಿತಾಗಿಯೇ ಸಾಕಷ್ಟು ಮನವಿ ಬರುತ್ತಿವೆ ನಾವು ಪ್ರಯತ್ನಿಸುತ್ತಿದ್ದೇವೆ ಎಂದಷ್ಟೇ ಉತ್ತರ ನೀಡುತ್ತಿದ್ದಾರೆ. ಸಂಬಂಧಿಸಿದವರು ಈ ಸಮಸ್ಯೆ ಬಗೆಹರಿಸಬೇಕೆಂದು ಹಾಗು ಅಭ್ಯರ್ಥಿಗಳು NEET ಆನ್ಲೈನ್ ಅರ್ಜಿ ಸಲ್ಲಿಸಲು ಕಲಾವಕಾಶವನ್ನು ವಿಸ್ತರಿಸಬೇಕೆಂದು ಅಭ್ಯರ್ಥಿಗಳು ಮತ್ತು ಪೋಷಕರು ಒತ್ತಾಯಿಸಿದ್ದಾರೆ.


RELATED ARTICLES
- Advertisment -
Google search engine

Most Popular