ಕೊಡಗು: ಕೊಡಗು ಜಿಲ್ಲೆ ಗುಡ್ಡಗಾಡು ಬೆಟ್ಟಗಳ ಪ್ರದೇಶ ಹಾಗೂ ಇಲ್ಲಿ ಹಲವಾರು ಸಮಸ್ಯೆಗಳು ಇದೆ. ಸುಮಾರು ವರ್ಷಗಳಿಂದ ಇಲ್ಲಿನ ಜನರು ವೈದ್ಯಕೀಯ ಸೇವೆ ಮತ್ತು ಶಿಕ್ಷಣಕ್ಕಾಗಿ ಅಕ್ಕ ಪಕ್ಕದ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಅವಲಂಬಿಸಿರುತ್ತಾರೆ. ಕೊಡಗು ಜಿಲ್ಲೆಯಲ್ಲಿ ವಿವಿ ಇಲ್ಲದಿರುವುದರಿಂದ ಇಡೀ ಜಿಲ್ಲೆಯಲ್ಲಿ ಪ್ರಮುಖವಾಗಿ ದಕ್ಷಿಣ ಕೊಡಗಿನ ಭಾಗದಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳನ್ನು ಅನ್ಯ ಜಿಲ್ಲೆಗೆ ಅಲ್ಲದೆ ವಿದೇಶಗಳಲ್ಲಿ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಾರೆ ಅದಕ್ಕಾಗಿ ಕೋಟಿ ಕೋಟಿ ಸಾಲ ಮಾಡಿ ಆಸ್ತಿ, ಓಡವೆ ಅಡವಿಟ್ಟು, ತಾಯಂದಿರು ತಮ್ಮ ಕರಿಮಣಿ ಮಾರಿರುವ ಕಣ್ಣಿರಿನ ಕಥೆಗಳು ಅನೇಕ ಇದೆ.
ಕೊಡಗು ಜಿಲ್ಲೆಯಲ್ಲಿ ವಿವಿ ಉಳಿಸಿದರೆ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಯೇ ಓದಿಸುತ್ತಾರೆ ಜೊತೆಗೆ ಅನೇಕ ಉಪನ್ಯಾಸಕರಿಗೆ ಉದ್ಯೋಗ ಸಿಗುತ್ತದೆ ಸಂಶೋಧನೆಗೆ ಅವಕಾಶ ಆಗುತ್ತದೆ. ಕೊಡಗು ಜಿಲ್ಲೆಗೆ ಅಭಿವೃದ್ಧಿ ವಿಷಯದಲ್ಲಿ ಬಹಳಷ್ಟು ಹಿಂದೆ ಬಿದ್ದಿದೆ, ಜಿಲ್ಲೆಗೆ ವಿವಿ ಉಳಿಸಿ ಬೆಳೆಸುವುದರಿಂದ ಇಲ್ಲಿನ ಆರ್ಥಿಕ ಪ್ರಗತಿಗೆ ಸಹಾಯ ಆಗುತ್ತದೆ. ವಿಷಯದ ಗಂಭೀರತೆಯನ್ನು ಅರಿತು ಕೊಡಗು ವಿವಿ ಉಳಿಸಲು ಸರ್ಕಾರದ ಮಟ್ಟದಲ್ಲಿ ಎಲ್ಲಾ ಪ್ರಯತ್ನ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ ವತಿಯಿಂದ ಮನವಿ ಪತ್ರ ಉನ್ನತ ಶಿಕ್ಷಣ ಸಚಿವರಾದ ಶ್ರೀ ಸುಧಾಕರ ಕಛೇರಿಗೆ ಮನವಿ ಪತ್ರ ನೀಡಲಾಯಿತು.