Sunday, April 20, 2025
Google search engine

Homeರಾಜ್ಯಆಪ್‌ ಸರ್ಕಾರ ದೆಹಲಿಯನ್ನು ಆಪತ್ತುಗೆ ತಳ್ಳಿದೆ: ಪ್ರಧಾನಿ ಮೋದಿ ಕಿಡಿ

ಆಪ್‌ ಸರ್ಕಾರ ದೆಹಲಿಯನ್ನು ಆಪತ್ತುಗೆ ತಳ್ಳಿದೆ: ಪ್ರಧಾನಿ ಮೋದಿ ಕಿಡಿ

ನವದೆಹಲಿ: ಆಪ್ ದೆಹಲಿ ನಗರಕ್ಕೆ ಆಪತ್ತು. ನಾನು ಜನರಿಗಾಗಿ ಮನೆ ಕಟ್ಟಿದ್ದೇನೆ, ನನಗಾಗಿ `ಶೀಷ ಮಹಲ್’ ಕಟ್ಟಿಲ್ಲ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಮೋದಿ ತಿರುಗೇಟು ನೀಡಿದ್ದಾರೆ .

ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ಮೋದಿ ಜುಗ್ಗಿ – ಜೋಪ್ರಿ’ (ಜೆಜೆ) ಕ್ಲಸ್ಟರ್‌ಗಳಿಗಾಗಿ 1,675 ಫ್ಲಾಟ್‌ಗಳು ಮತ್ತು ಎರಡು ನಗರ ಪುನರಾಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮೋದಿ ಎಂದಿಗೂ ತಮಗಾಗಿ ಮನೆಯನ್ನು ನಿರ್ಮಿಸಲಿಲ್ಲ. ಆದರೆ, ಬಡವರಿಗೆ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದಾರೆ ಎಂದು ದೇಶಕ್ಕೆ ಚೆನ್ನಾಗಿ ತಿಳಿದಿದೆ .

ನಗರದಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಆಪ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಲ್ಲಿ ದೆಹಲಿಯಲ್ಲಿ ವಿಪತ್ತು ಸುತ್ತುವರಿದಿದೆ. ಅಣ್ಣಾ ಹರಾಜೆ ಅವರನ್ನು ಮುಂದಿಟ್ಟುಕೊಂಡು ಬಂದ ಕೆಲವರು ಅಪ್ರಮಾಣಿಕರು ದೆಹಲಿಯನ್ನು ಆಪತ್ತಿಗೆ ತಳ್ಳಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular