ಮೈಸೂರು: ಆರಾಧ್ಯ ಪ್ರೀಮಿಯರ್ ಲೀಗ್ ಸೀಸನ್ – 2 ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಆರಾಧ್ಯ ಸ್ಟ್ರೈಕರ್ಸ್ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಜೆ.ಪಿ ನಗರದ ಪುಟ್ಟರಾಜ ಗವಾಯಿ ಸ್ಟೇಡಿಯಂನಲ್ಲಿ ಎರಡು ದಿನ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ನಂದಿಪುರ ರಾಮಾರಾಧ್ಯ ಹಾಗೂ ಪತ್ರಕರ್ತ ಬೆಕ್ಕರೆ ಸತೀಶ್ ಆರಾಧ್ಯ ಮಾಲೀಕತ್ವದ ಕಿರಣ್ ಆರಾಧ್ಯ ನಾಯಕತ್ವದ ಮೈಸೂರಿನ ಆರಾಧ್ಯ ಸ್ಟ್ರೈಕರ್ಸ್ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್ ಪಂದ್ಯದಲ್ಲಿ ಕನಕಪುರದ ಪಂಚಾಚಾರ್ಯ ತಂಡದ ವಿರುದ್ಧ 30 ರನ್ ಅಂತರದ ಗೆಲುವು ಸಾಧಿಸಿ ಚಾಂಪಿಯನ್ ಆಗಿ 25 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಜೊತೆಗೆ ಆಟಗಾರರಿಗೆ ಮೆಡಲ್ ಅಭಿನಂದನ ಪತ್ರ ನೆನಪಿನ ಕಾಣಿಕೆ ಪಡೆದುಕೊಂಡಿತು, ರನ್ನರ್ ಆಫ್ ಆದ ಪಂಚಾಚಾರ್ಯ ತಂಡ 15 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಜೊತೆಗೆ ಆಟಗಾರರಿಗೆ
ಮೆಡಲ್ ಅಭಿನಂದನ ಪತ್ರ ನೆನಪಿನ ಕಾಣಿಕೆ ಪಡೆದುಕೊಂಡಿತು.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರಾಧ್ಯ ಸ್ಟ್ರೈಕರ್ಸ್ ತಂಡ 5 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿತು ಬಳಿಕ ಬ್ಯಾಟ್ ಮಾಡಿದ ಪಂಚಾಚಾರ್ಯ ತಂಡ 5 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 26 ರನ್ ಗಳಿಸಲಷ್ಟೇ ಸಫಲವಾಯಿತು, ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರಾಧ್ಯ ಸ್ಟ್ರೈಕರ್ಸ್ ತಂಡದ ನಿತಿನ್ ಆರಾಧ್ಯ ಪಂದ್ಯ ಪುರುಷೋತ್ತಮ, ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಹೆಚ್ಚು ವಿಕೆಟ್ ಪಡೆದಿದ್ದ ಪಂಚಾಚಾರ್ಯ ತಂಡದ ರಕ್ಷಿ ತ್ ಆರಾಧ್ಯ ಉತ್ತಮ ಬೌಲರ್, ಹೆಚ್ಚು ರನ್ ಗಳಿಸಿದ್ದ ಪವರ್ ಹಿಟ್ಟರ್ ತಂಡದ ಮಧು ಆರಾಧ್ಯ ಉತ್ತಮ ಬ್ಯಾಟ್ಸ್ಮನ್ ಹಾಗೂ ಮಂಡ್ಯ ರೈಡರ್ಸ್ ತಂಡದ 14 ವರ್ಷದ ಕಿರಿಯ ಆಟಗಾರ ಯಶಸ್ ಆರಾಧ್ಯ ಎಮರ್ಜಿಂಗ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ಭಾಜನರಾದರು.
ಆರಾಧ್ಯ ಸ್ಟ್ರೈಕರ್ ತಂಡದ ನಾಯಕ ಕಿರಣ್ ಕುಮಾರ್ ಆರಾಧ್ಯ ಮಾತನಾಡಿ ಟೂರ್ನಿ ಆಯೋಜಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.
ಪಂಚಾಚಾರ್ಯ ತಂಡದ ನಾಯಕ ಸುದರ್ಶನ್ ಆರಾಧ್ಯ ಮಾತನಾಡಿ ಟೂರ್ನಿ ಆಯೋಜನೆಯಿಂದ ಆರಾಧ್ಯ ಜನಾಂಗದ ಯುವಕರೆಲ್ಲ ಒಂದೆಡೆ ಸೇರುವಂತೆ ಮಾಡಿದ್ದು ಸಂತಸದ ವಿಷಯವಾಗಿದೆ ಮುಂದಿನ ಬಾರಿ ನಮ್ಮ ತಂಡದಿಂದಲೆ ಟೂರ್ನಿ ಆಯೋಜಿಸುವುದಾಗಿ ತಿಳಿಸಿದರು.
ಮೈಸೂರಿನ ಆರಾಧ್ಯ ಸ್ಟ್ರೈಕರ್ಸ್ ತಂಡ ಆಯೋಜಿಸಿದ್ದ ಟೂರ್ನಿಯಲ್ಲಿ ಪವರ್ ಹಿಟ್ಟರ್, ಆರಾಧ್ಯ ಚಾಲೆಂಜರ್ಸ್, ಕರುನಾಡ ಕದಂಬ, ಮಂಡ್ಯದ ಮಂಡ್ಯ ರೈಡರ್ಸ್, ಕನಕಪುರದ ಪಂಚಾಚಾರ್ಯ, ಪಿರಿಯಾಪಟ್ಟಣದ ಹರಳಹಳ್ಳಿಯ ಜೆ.ಪಿ ಕ್ರಿಕೆಟರ್ಸ್, ಹುಣಸೂರಿನ ಗಂಧದಗುಡಿ, ಎಚ್.ಡಿ ಕೋಟೆ ಭೀಮನಹಳ್ಳಿಯ ಅಪ್ಪು ಬಾಯ್ಸ್, ಕೊಳ್ಳೇಗಾಲದ ಆರಾಧ್ಯ ರಾಕರ್ಸ್ ತಂಡಗಳು ಭಾಗವಹಿಸಿದ್ದವು ಎಲ್ಲ ತಂಡಗಳಿಗೂ ಟ್ರೋಫಿ ಹಾಗೂ ಆಟಗಾರರಿಗೆ ಅಭಿನಂದನಾ ಪತ್ರ ವಿತರಿಸಲಾಯಿತು, ಇದೆ ವೇಳೆ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಅಂಗವಾಗಿ ಅಪ್ಪು ಬಾಯ್ಸ್ ತಂಡ ವತಿಯಿಂದ ಕೇಕ್ ಕತ್ತರಿಸಿ ಸಿಹಿ ವಿತರಿಸಲಾಯಿತು.

ಈ ಸಂದರ್ಭ ಆರಾಧ್ಯ ಸ್ಟ್ರೈಕರ್ಸ್ ತಂಡದ ಮಾಲೀಕರಾದ ನಂದಿಪುರ ರಾಮರಾಧ್ಯ, ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ, ಆರಾಧ್ಯ ಮಹಾಸಭಾ ಉಪಾಧ್ಯಕ್ಷರಾದ ವರಲಕ್ಷ್ಮಿ ಕುಮಾರ್ ಆರಾಧ್ಯ, ನಿರ್ದೇಶಕರಾದ ಪುಟ್ಟಬುದ್ಧಿ ಆರಾಧ್ಯ, ಅಶೋಕ್ ಆರಾಧ್ಯ, ಅನು ಕುಮಾರ್ ಆರಾಧ್ಯ, ಟಗರಪುರ ಗುರುಸೋಮರಾಧ್ಯ ಮತ್ತು ಆರಾಧ್ಯ ಸ್ಟ್ರೈಕರ್ಸ್ ಹಾಗೂ ಪಂಚಾಚಾರ್ಯ ತಂಡದ ಆಟಗಾರರು ಇದ್ದರು.