ಸುದೀಪ್ ಪತ್ನಿ ಪ್ರಿಯಾ ಡ್ರೋಣ್ ಲೈಟಿಂಗ್ ಮೂಲಕ ಪತಿಯ ಭಾವಚಿತ್ರಗಳನ್ನ ಪ್ರದರ್ಶನ ಮಾಡುವ ಮೂಲಕ ವಿಶೇಷವಾಗಿ ವಿಶ್ ಮಾಡಿದರು.
‘ಕಿಚ್ಚ’ ಸುದೀಪ್ ಹುಟ್ಟುಹಬ್ಬ ಆಚರಣೆ ಕಿಚ್ಚ, ರನ್ನ, ಬಾದಾ ಶಾ, ಅಭಿನಯ ಚಕ್ರವರ್ತಿ, ಹೆಬ್ಬುಲಿ, ಪೈಲ್ವಾನ್ ಹೀಗೆ ಹಲವಾರು ಬಿರುದುಗಳನ್ನ ಹೊಂದಿರುವ ಏಕೈಕ ನಟ ಸುದೀಪ್. ಕೋಟ್ಯಂತರ ಅಭಿಮಾನಿಗಳ ಅಚ್ಚುಮೆಚ್ಚಿನ ನಟನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ೫೦ನೇ ವಸಂತಕ್ಕೆ ಕಾಲಿಟ್ಟಿರುವ ಕಿಚ್ಚ ಸುದೀಪ್ ಈ ಬಾರಿಯ ಬರ್ತ್ ಡೇಯನ್ನ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಕಿಚ್ಚನ ಹುಟ್ಟು ಹಬ್ಬಕ್ಕೆ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಅನೌನ್ಸ್ ಆಗುತ್ತಿದೆ. ಇದರ ಜತೆಗೆ ಸುದೀಪ್ ೫೦ನೇ ವರ್ಷದ ಹುಟ್ಟು ಹಬ್ಬವನ್ನ ಸ್ಪೆಷಲ್ ಆಗಿ ಮಾಡಲಾಗಿದೆ. ನಾಯಂಡನಹಳ್ಳಿ ಸಮೀಪ ಇರುವ ನಂದಿ ಲಿಂಕ್ ಗ್ರೌಂಡ್‌ಗೆ ಸುಮಾರು ೧೧ ಗಂಟೆಗೆ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್, ಮಗಳು ಸಾನ್ವಿ ಸೇರಿದಂತೆ ಚಿತ್ರರಂಗದ ಗೆಳೆಯರು ಆಗಮಿಸಿದರು. ಅದ್ದೂರಿಯಾಗಿ ಹಾಕಲಾಗಿದ್ದ ಸ್ಟೇಜ್ ಮೇಲೆ ಕಿಚ್ಚ ಸುದೀಪ್ ೧೨ ಗಂಟೆಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಸಂಭ್ರಮಿಸಿದರು. ಸುದೀಪ್ ಪತ್ನಿ ಪ್ರಿಯಾ, ಪುತ್ರಿ ಸೇರಿದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಭಾಗಿಯಾಗಿ ಕೇಕ್ ತಿನ್ನಿಸಿ ಶುಭ ಕೋರಿದರು. ಸಾವಿರಾರು ಅಭಿಮಾನಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.
ಸುದೀಪ್ ಪತ್ನಿ ಪ್ರಿಯಾ ಡ್ರೋಣ್ ಲೈಟಿಂಗ್ ಮೂಲಕ ಪತಿಯ ಭಾವಚಿತ್ರಗಳನ್ನ ಪ್ರದರ್ಶನ ಮಾಡುವ ಮೂಲಕ ವಿಶೇಷವಾಗಿ ವಿಶ್ ಮಾಡಿದರು. ಸಿನಿಮಾ ಜೊತೆ ಜೊತೆಗೆ ಕಿಚ್ಚ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಹುಟ್ಟು ಹಬ್ಬ ಆಚರಿಸಿಕೊಳ್ಳದೇ ದೂರ ಉಳಿದಿದ್ದ ಸುದೀಪ್ ಈ ವರ್ಷ ಅಭಿಮಾನಿಗಳ ಜತೆ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಇಂದು ಕೂಡ ಅವರು ಫ್ಯಾನ್ಸ್ ಜೊತೆ ಕಾಲ ಕಳೆಯಲಿದ್ದಾರೆ.
ಕಿಚ್ಚ ಸುದೀಪ್ ಕೇಕ್ ಕಟ್ ಮಾಡುವಾಗ ಮೊಬೈಲ್ ಟಾರ್ಚ್ ಆನ್ ಮಾಡಿದ ಸಾವಿರಾರು ಅಭಿಮಾನಿಗಳು ವಿಶೇಷ ರೀತಿಯಲ್ಲಿ ವಿಶ್ ಮಾಡಿದರು. ಅಭಿಮಾನಿಗಳ ಅಭಿಮಾನ ಕಂಡು ಸುದೀಪ್ ಸಂತಸ ಪಟ್ಟರು. ಸುದೀಪ್ ಅವರ ೫೦ನೇ ಹುಟ್ಟು ಹಬ್ಬದ ಪ್ರಯುಕ್ತ ಪತ್ನಿ ಪ್ರಿಯಾ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಮಧ್ಯರಾತ್ರಿ ಸುದೀಪ್ ಹಾಗೂ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದರು. ಕಿಚ್ಚನ ಭಾವಚಿತ್ರಗಳನ್ನ ಡ್ರೋನ್ ಲೈಟ್ಸ್ ಸಹಾಯದಿಂದ ಆಗಸದಲ್ಲಿ ಚಿತ್ತಾರ ಬಿಡಿಸಲಾಗಿತ್ತು. ಆಗಸದಲ್ಲಿ ಡ್ರೋನ್ ಮೂಲಕ ‘Happy Birthday Kichcha’ಎಂಬ ಸಾಲುಗಳು ಹಾಗೂ ಅವರ ಜನಪ್ರಿಯ ಪಾತ್ರಗಳ ಚಿತ್ತಾರ ಕಂಡು ಸುದೀಪ್ ಮತ್ತು ಅಭಿಮಾನಿಗಳು ಪುಳಕಿತರಾದರು.