Saturday, October 4, 2025
Google search engine

Homeಸಿನಿಮಾಅಭಿಷೇಕ್‌ ಅಂಬರೀಶ್‌ ನಟನೆಯ ‘ಬ್ಯಾಡ್ ಮ್ಯಾನರ್ಸ್’ ನ.24ಕ್ಕೆ ತೆರೆಗೆ

ಅಭಿಷೇಕ್‌ ಅಂಬರೀಶ್‌ ನಟನೆಯ ‘ಬ್ಯಾಡ್ ಮ್ಯಾನರ್ಸ್’ ನ.24ಕ್ಕೆ ತೆರೆಗೆ

ಅಭಿಷೇಕ್‌ ಅಂಬರೀಶ್‌ “ಅಮರ್‌’ ಸಿನಿಮಾ ಮೂಲಕ ಲಾಂಚ್‌ ಆಗಿದ್ದು ನಿಮಗೆ ಗೊತ್ತೇ ಇದೆ. ಆ ಚಿತ್ರ 2019ರಲ್ಲಿ ತೆರೆಕಂಡಿತ್ತು. ಆ ಬಳಿಕ ಅಭಿಷೇಕ್‌ ನಟನೆಯ ಯಾವ ಚಿತ್ರ ತೆರೆಕಂಡಿಲ್ಲ. ಈಗ ಅವರು ನಾಯಕರಾಗಿರುವ ಎರಡನೇ ಚಿತ್ರವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಬ್ಯಾಡ್‌ ಮ್ಯಾನರ್’.

ತನ್ನ ಎರಡನೇ ಸಿನಿಮಾಕ್ಕೆ ನೇರವಾಗಿ ಸೂರಿ ಗರಡಿ ಹೊಕ್ಕ ಅಭಿಷೇಕ್‌ ಈಗ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ. ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದು, ನ.24ಕ್ಕೆ ಚಿತ್ರ ತೆರೆಕಾಣುತ್ತಿದೆ. ಈ ಮೂಲಕ ಮಾಸ್‌ ಸಿನಿಮಾವೊಂದು ರಿಲೀಸ್‌ ಅಖಾಡಕ್ಕೆ ಇಳಿದಂತಾಗಿದೆ.

ಇನ್ನು, ಈ ಸಿನಿಮಾದಲ್ಲಿ ಅಭಿಷೇಕ್‌ ಆ್ಯಕ್ಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಪಕ್ಕಾ ಸೂರಿ ಶೈಲಿಯ ಸಿನಿಮಾ ಇದಾಗಿದ್ದು, ಚಿತ್ರರಂಗ ಕೂಡಾ ಈ ಸಿನಿಮಾ ಮೇಲೆ ಒಂದು ಕಣ್ಣಿಟ್ಟಿದೆ. ಸುಧೀರ್‌ ಕೆ ಎಂ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸೂರಿ ಸಿನಿಮಾ ಎಂದಾಗ ಆ ಚಿತ್ರದ ಮೇಲಿನ ನಿರೀಕ್ಷೆಯೇ ಬೇರೆಯದ್ದಾಗಿರುತ್ತದೆ. ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ತಮ್ಮ ಶೈಲಿಯಲ್ಲೇ ಹೊಸದೇನನ್ನೋ ಕಟ್ಟಿಕೊಡುತ್ತಾರೆ. ಮೇಕಿಂಗ್‌ ನಿಂದ ಹಿಡಿದು ಸಿನಿಮಾಗಳ ಪಾತ್ರ ಪೋಷಣೆ ಕೂಡಾ ಹೊಸದಾಗಿರುತ್ತದೆ. ಈ ನಿಟ್ಟಿನಲ್ಲಿ ಸೂರಿ ಸಿನಿಮಾ ಎಂದಾಗ ಅಭಿಮಾನಿಗಳ ನಿರೀಕ್ಷೆ ಬೇರೆಯದ್ದೇ ಆಗಿರುತ್ತದೆ. ಈಗ “ಬ್ಯಾಡ್‌ಮ್ಯಾನರ್’ ಕೂಡಾ ಅಂತಹುದೇ ನಿರೀಕ್ಷೆ ಹುಟ್ಟುಹಾಕಿದೆ.

ಮುಖ್ಯವಾಗಿ ಅಭಿಷೇಕ್‌ ಅಂಬರೀಶ್‌ ಸೂರಿ ಸ್ಟೈಲ್‌ಗೆ ಹೊಂದಿಕೊಂಡಿದ್ದಾರೆ. ಅದು ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌, ಹಾಡು ಹಾಗೂ ಫ‌ಸ್ಟ್‌ಲುಕ್‌ಗಳಲ್ಲಿ ಸಾಬೀತಾಗಿದೆ. ಸುಧೀರ್‌ ಕೆ ಎಂ ಈ ಚಿತ್ರವನ್ನು ನಿರ್ಮಿಸಿದ್ದಾರೆ.

RELATED ARTICLES
- Advertisment -
Google search engine

Most Popular