ಮಂಡ್ಯ: ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಇತ್ತೀಚೆಗಷ್ಟೆ ಭಾರಿ ಅದ್ದೂರಿಯಾಗಿ ಬೆಂಗಳೂರಿನಲ್ಲಿ ನಡೆದಿದೆ.
ಅಭಿಷೇಕ್-ಅವಿವಾರ ಮದುವೆ ಬೀಗರೂಟ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಆಯೋಜಿಸಲಾಗಿದೆ. ಮದುವೆಯಷ್ಟೆ ಅದ್ಧೂರಿಯಾಗಿ ಬೀಗರೂಟ ಕಾರ್ಯಕ್ರಮ ಆಯೋಜಿತವಾಗಿದ್ದು, ಭಾರಿ ಸಂಖ್ಯೆಯ ಜನರಿಗೆ ಅಂಬರೀಶ್‌ಗೆ ಪ್ರಿಯವಾದ ಮಾಂಸದೂಟ ಹಾಕಿಸಲು ತಯಾರಿ ಈಗಾಗಲೇ ಆರಂಭವಾಗಿದೆ. ಎಷ್ಟೇ ಸಾವಿರ ಜನರು ಬಂದರೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸಿದ್ಧತೆ ಪರಿಶೀಲನೆ ಬಳಿಕ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿಕೆ ನೀಡಿದ್ದಾರೆ.
ಜು. 16ರ ಶುಕ್ರವಾರ ಮಂಡ್ಯದ ಗೆಜ್ಜಲಗೆರೆ ಕಾಲೋನಿ ಬಳಿ ಬೀಗರ ಔತಣಕೂಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ 11ಗಂಟೆಯಿಂದಲೇ ಊಟದ ವಿತರಣೆ ಆರಂಭವಾಗಲಿದೆ.
ಸಿನೆಮಾ ಹಾಗೂ ರಾಜಕೀಯದಲ್ಲಿ ಅಂಬಿ ಕುಟುಂಬ ಪರ ನಿಂತ ಎಲ್ಲರಿಗೂ ಊಟ ಹಾಕಿಸುವುದು ಕುಟುಂಬಸ್ಥರ ಆಸೆ. ಅದರಂತೆ ಅಭಿಷೇಕ್ ಬೀಗರ ಊಟ ಮಂಡ್ಯದಲ್ಲೇ ಮಾಡಲಾಗ್ತಿದೆ. ಸ್ಥಳೀಯ ಬಾಣಸಿಗರಿಂದಲೇ ಅಡುಗೆ ತಯಾರು ಮಾಡಿಸಲಾಗ್ತಿದೆ.
ಅಂಬರೀಶ್ ಅವರಿಗೆ ಪ್ರಿಯವಾದ ಕೈಮಾ, ಬೋಟಿ ಗೊಜ್ಜು, ಮಟನ್ ಸೇರಿದಂತೆ ಮಂಡ್ಯ ಶೈಲಿಯಲ್ಲೇ ಅಡುಗೆ ಇರಲಿದೆ.
ವಧು ವರರಿಗೆ ಕೇಕ್, ಹಾರ – ಬೊಕ್ಕೆ ತರದೆ ಜನರು ಬಂದು ಆಶೀರ್ವಾದ ಮಾಡದರೆ ಸಾಕು ಎಂದು ಅಭಿಷೇಕ ಅಂಬರೀಶ್ ಮನವಿ ಮಾಡಿದ್ದಾರೆ.
ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಕುಟುಂಬ ಸದಸ್ಯರಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.