Saturday, April 19, 2025
Google search engine

Homeರಾಜ್ಯಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ

ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ

ವರದಿ: ಎಡತೊರೆ ಮಹೇಶ

ಎಚ್.ಡಿ.ಕೋಟೆ: 1976 ಫೆಬ್ರವರಿ 9ರಂದು ಜೀತ ಪದ್ಧತಿ ರದ್ದತಿ ಕಾನೂನು ಅಂಗೀಕಾರ ದಿನವಾಗಿದ್ದು ಇದನ್ನ ರಾಜ್ಯ ಸರ್ಕಾರ ಜೀತ ಪದ್ಧತಿ ನಿರ್ಮೂಲನಾ ದಿನವನ್ನಾಗಿ ಆಚರಿಸಲಾತ್ತಿದೆ.

ಈ ಹಿನ್ನೆಲೆಯಲ್ಲಿ  ತಾಲೋಕು ಆಡಳಿತದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ಕೃಷ್ಣರಾಜ್ ಮಾತಾನಾಡಿ ಜೀತ ಪದ್ದತಿ ನಮ್ಮ ದೇಶದ ಅಭಿವೃದ್ಧಿ ಮಾರಕವಾದದ್ದು ಇದನ್ನ ಸಂಪೂರ್ಣವಾಗಿ ತಡೆಗಟ್ಟಲು ನಾವು ಪ್ರಾಮಾಣಿಕ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಬಿಡುಗಡೆ ಮತ್ತು ಪುನರ್ವಸತಿ ಕೆಲಸ ನಿರಂತರವಾಗಿ ನಡೆಯುತ್ತಿರಬೇಕು ಹಾಗೂ ಜೀತ ನಿರ್ಮಾಲನೆಯಲ್ಲಿ ಜೀವಿಕ ಸಂಘಟನೆಯ ಪಾತ್ರ ಅತ್ಯಂತ ಶ್ಲಾಘನೀಯ ಎಂದರು.

ಜೀತ ಕಾನೂನು ಮತ್ತು ಜಾರಿ ಕುರಿತು ಮಾತಾಡಿದ ಜೀವಿಕ ರಾಜ್ಯ ಸಂ. ಸಂಚಾಲಕ ಉಮೇಶ್. ಬಿ. ನೂರಲಕುಪ್ಪೆ ಮಾತಾನಾಡಿ ಜೀತ ಪದ್ಧತಿ ಅತ್ಯಂತ ಘೋರ ವ್ಯವಸ್ಥೆಯಾಗಿದೆ ಮನುಷ್ಯ ಮನುಷ್ಯನನ್ನ ದುಡಿಸಿಕೊಳ್ಳುವ ಪ್ರಾಣಿಗಳಿಗಿಂತಲೂ ಹೀನಾಯವಾಗಿ ನೋಡಿಕೊಳ್ಳುವ ಅಮಾನವೀಯ ಪದ್ಧತಿಯನ್ನು 1976 ಜೀತ ಪದ್ಧತಿ ರದ್ದತಿ ಕಾನೂನಿನ ಮೂಲಕ ನಿರ್ಮಾಲನೆ ಮಾಡಲು ನಾವು ಹಗಲಿರುಳು ಶ್ರಮಿಸುವ ಅವಶ್ಯಕತೆ ಇದೆ. ಇಂದು ಜೀವಿಕ ಸಂಘಟನೆಯ ಮೂವತ್ತು ವರ್ಷಗಳ ನಿರಂತರ ಹೋರಾಟ ಫಲವಾಗಿ ರಾಜ್ಯದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಜೀತ ಮುಕ್ತರಾಗಿದ್ದಾರೆ ಮತ್ತು ಜೀತ ನಿರ್ಮಾಲನೆಯಲ್ಲಿ ಮೈಸೂರು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಹಾಗೆ ನಾವು ಜೀತ ನಿರ್ಮೂಲನೆ ದಿನವನ್ನು ಫೆಬ್ರವರಿ 9ರ ಬದಲಾಗಿ ಆಕ್ಟೋಬರ್ 25 ರಂದು ಆಚರಿಸಬೇಕು ಯಾಕೆಂದರೆ ಜೀತ ಕಾನೂನು ಜಾರಿಯಾದ ದಿನವಾಗಿದೆ ಎಂದರು.

ಬಿಡುಗಡೆ ಮತ್ತು ಪುನರ್ವಸತಿ ಕುರಿತು ಮಾತಾನಾಡಿದ ಜಿಲ್ಲಾ ಸಂಚಾಲಕ ಬಸವರಾಜ್ ಜೀತ ಮುಕ್ತರಿಗೆ ಸರಿಯಾಗಿ ಸವಲತ್ತುಗಳನ್ನು ವಿತರಿಸದೇ ಅನುದಾನವಿಲ್ಲ ಎಂದು ಹೇಳುತ್ತಾ ಜೀತ ಮುಕ್ತರನ್ನ ಮತ್ತೆ ಜೀತಕ್ಕೆ ಪ್ರಯತ್ನ ನಡೆಯುತ್ತಿದೆ ಹಾಗೂ ಕೇಂದ್ರ ಸರ್ಕಾರದ ಎಸ್ ಒ ಪಿ ಜೀತದಾಳುಗಳಿಗೆ ಮಾರಕವಾಗಿದೆ ಇದರಿಂದ ಜೀತ ನಿರ್ಮೂಲನ ಆಗುವುದಿಲ್ಲ ಆದರೆ ಹಳ್ಳಿಗಳಲ್ಲಿ ಗೊಂದಲ ನಿರ್ಮಾಣವಾಗಿದೆ ಅದ್ದರಿಂದ ಎಸ್ ಒ ಪಿ ಅನ್ನು ರದ್ದು ಪಡಿಸಬೇಕು ಎಂದರು.

ಇದೆ ಸಂದರ್ಭದಲ್ಲಿ ಜೀತ ಮುಕ್ತರಾಗಿ ಸ್ವತಂತ್ರ ಜೀವನ ರೂಪಿಸಿಕೊಂಡು ಜೀತ ನಿರ್ಮೂಲನೆಗೆ ಶ್ರಮಿಸುತ್ತಿರುವ ಮುಖಂಡರನ್ನ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ತಹಶಿಲ್ದಾರ ಶ್ರೀನಿವಾಸ. ಇಒ ಧರಣೇಶ್. ವೈದ್ಯಾಧಿಕಾರಿ ಡಾ. ಸೋಮಣ್ಣ. ಬಿಇಒ ಮಾರಯ್ಯ. ಟಿಎಸ್ ಡ್ಬ್ಲು  ರಾಮಸ್ವಾಮಿ. ಸಿಡಿಪಿಒ ಶ್ರೀಮತಿ ಆಶಾ. ಬಿಸಿಎಮ್ ಅಧಿಕಾರಿ ಶಶಿಕಲಾ. ಜೀವಿಕ ಸಂಚಾಲಕರಾದ ಚಂದ್ರಶೇಖರ ಮೂರ್ತಿ. ಶಿವರಾಜ್. ವೆಂಕಟೇಶ. ಮಹೇಶ್. ಜೀತ ಮುಕ್ತ ಮುಖಂಡರಾದ ಮಹದೇವ್. ಶಿವಣ್ಣ. ಮಲ್ಲಿಗಮ್ಮ. ಗೋಪಾಲ್. ಲಕ್ಷ್ಮಮ್ಮ. ಜಯಮ್ಮ. ನಂಜುಂಡಯ್ಯ. ಮುಂತಾದವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular