ಮಂಡ್ಯ : ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆ! ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬ, ಪ್ಲಾಸ್ಟಿಕ್ ಟಾರ್ಪಲ್ ಅಡಿಯಲ್ಲೇ ರಾತ್ರಿ ಹಗಲು ಕಳೆದಯುತ್ತಿರು ಕುಟುಂಬ ಮಂಡ್ಯ ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಓಈ ಘಟನೆ ನಡೆದಿದೆ.
ಸರ್ವೆ ನಂಬರ್ ೩೩೧ರ ಆಸ್ತಿ ಕಂಬದನರಸಿಂಹಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗ ಎಂದು ಬೋರ್ಡ್ ಹಾಕಿದ ಅಧಿಕಾರಿಗಳು,
ದೇವಸ್ಥಾನದ ಪಕ್ಕದಲ್ಲೆ ಇರುವ ಜಾಗ ದೇವಸ್ಥಾನದ ಆಸ್ತಿ ಎಂದು ಜಪ್ತಿ ಮಾಡಿದ್ದಾರೆ. ೨೦೧೮ರಿಂದಲೂ ಜಾಗ ಬಿಡುವಂತೆ ಕುಟುಂಬಕ್ಕೆ ದೌರ್ಜನ್ಯ ಮಾಡಿದರು, ಜಮೀನನ್ನು ಖರೀದಿಗೆ ಕೇಳಿದ್ದ ಗ್ರಾಮದ ಮಹೇಶ್ . ಜಮೀನು ಕೊಡದಿದ್ದಕ್ಕೆ ಈ ರೀತಿಯ ಕಿರುಕುಳ ನೀಡುತ್ತಿದ್ದಾರೆ.
ದಾಖಲಾತಿ ಇದ್ದರು ನಮ್ಮ ಜಾಗ ಬಿಟ್ಟುಕೊಡಲು ಬೆದರಿಕೆಯಾಕಿದ್ದಾರೆ. ತಹಶೀಲ್ದಾರ್ ನೇತೃತ್ವದಲ್ಲಿ ಮನೆ ಸೀಜ್ ಮಾಡಿ ನಮಗೆ ಪೊಲೀಸರು ಕೂಡ ದೌರ್ಜನ್ಯ ಮಾಡ್ತಾರೆ ಎಂದು ಹೇಳಿದರು. ಅ.೨೯ ರಂದು ಮನೆ ಸೀಜ್ ಮಾಡಿ ಬೀದಿಗೆ ಬಿದ್ದ ಕುಟುಂಬವನ್ನ ತಿರುಗಿಯೂ ನೋಡದ ಅಧಿಕಾರಿಗಳು. ನಕಲಿ ದಾಖಲೆ ಸೃಷ್ಟಿಸಿ, ನೋಟಿಸ್ ಕೊಡದೆ ಏಕಾಏಕಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿದರು.
ನಮಗೆ ನ್ಯಾಯ ಕೊಡಿಸಿಕೊಡಿ, ಇಲ್ಲವಾದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
