ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಮುಂಚಿತವಾಗಿ ಭ್ರಷ್ಟಾಚಾರ ನಿಗ್ರಹ ದಳದ (ACB) ತಂಡವು ಎಎಪಿಯ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ (LG) ಪ್ರಧಾನ ಕಾರ್ಯದರ್ಶಿಗೆ ಮುಖ್ಯ ಕಾರ್ಯದರ್ಶಿ ಕಳುಹಿಸಿದ ಪತ್ರದ ನಂತ್ರ ಈ ತನಿಖೆಯನ್ನ ಪ್ರಾರಂಭಿಸಲಾಗಿದೆ. ಎಎಪಿ ಶಾಸಕರ ವಿರುದ್ಧದ ಲಂಚದ ಆರೋಪಗಳ ಬಗ್ಗೆ ತನಿಖೆ ನಡೆಸಲು ಪತ್ರವು ಸೂಚನೆಗಳನ್ನ ಒಳಗೊಂಡಿದೆ.
ಬಿಜೆಪಿ ತನ್ನ ಶಾಸಕರು ಮತ್ತು ಅಭ್ಯರ್ಥಿಗಳನ್ನು ಪಕ್ಷವನ್ನ ತೊರೆಯುವಂತೆ ಆಮಿಷ ಒಡ್ಡುತ್ತಿದೆ ಎಂದು ಎಎಪಿ ಆರೋಪಿಸಿದೆ. ಎಎಪಿ ಶಾಸಕ ಅಭ್ಯರ್ಥಿ ಅವಧ್ ಓಜಾ ಮಾತನಾಡಿ, 10-15 ಶಾಸಕರು ಬಿಜೆಪಿಯಿಂದ ಆಫರ್ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಎಎಪಿ ಶಾಸಕ ಜರ್ನೈಲ್ ಸಿಂಗ್, ಬಿಜೆಪಿ ನಮ್ಮ ಶಾಸಕರು ಮತ್ತು ಅಭ್ಯರ್ಥಿಗಳನ್ನ ಸೆಳೆಯಲು ಪ್ರಯತ್ನಿಸುತ್ತಿದೆ, ಆದ್ರೆ ನಾವು ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಅವರಿಗೆ ಭರವಸೆ ನೀಡಿದ್ದೇವೆ ಎಂದು ಹೇಳಿದರು.