ಮೈಸೂರು: ಮೈಸೂರು ದಕ್ಷಿಣ ವಲಯದ ನೂತನ ಡಿಐಜಿಯಾಗಿ ಡಾ.ಎಂ.ಬಿ. ಬೋರಲಿಂಗಯ್ಯ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.
ನಗರದ ಜಲಪುರಿಯಲ್ಲಿರುವ ದಕ್ಷಿಣ ವಲಯ ಕಚೇರಿಗೆ ಆಗಮಿಸಿದ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಮೈಸೂರು ಜಿಲ್ಲೆಯ ಸಶಸ ಪಡೆಯಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕಿ ಸೀಮಾ ಲಾಟ್ಕರ್ ಅವರು ಹೂಗುಚ್ಛ ನೀಡಿ ಡಾ.ಬೋರಲಿಂಗಯ್ಯ ಅವರನ್ನು ಸ್ವಾಗತಿಸಿದರು.
ದಕ್ಷಿಣ ವಲಯ ಐಜಿಪಿಯಾಗಿದ್ದ ಪ್ರವೀಣ್ ಮಧುಕರ್ ಪವಾರ್ ಅವರು ಸಿಐಡಿ ಬೆಂಗಳೂರು ಘಟಕಕ್ಕೆ ವರ್ಗಾವಣೆ ಹೊಂದಿದ್ದು, ಅವರು ದಕ್ಷಿಣ ವಲಯ ಐಜಿಪಿ ಪ್ರಭಾರವನ್ನು ಮೈಸೂರು ಎಸ್ಪಿ ಸೀಮಾ ಲಾಟ್ಕರ್ ಅವರಿಗೆ ವಹಿಸಿದ್ದರು. ಶುಕ್ರವಾರ ಮೈಸೂರಿಗೆ ಆಗಮಿಸಿದ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಡಿಐಜಿಯಾಗಿ ಅಧಿಕಾರ ಸ್ವೀಕರಿಸಿದರು.