ಗದಗ: ಕಳೆದ ವರ್ಷದ ಅಂಗನವಾಡಿಗಳಿಗೆ ಆಹಾರ ಪೂರೈಕೆ ಮಾಡಿದ್ದ ಬಿಲ್ಗಾಗಿ 1 ಲಕ್ಷ 60 ಸಾವಿರ ಬೇಡಿಕೆ ಇಟ್ಟಿದ್ದು , ಗುತ್ತಿಗೆದಾರನಿಂದ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಡಿಪಿಓ ಬಸಮ್ಮ ಹೂಲಿ ಹಾಗೂ ಎಫ್.ಡಿ.ಸಿ ಜಗದೀಶ್ ಲೋಕಾಬಲೆಗೆ ಸಿಕ್ಕಿಬಿದ್ದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.
ಅನಿಲ ದೊಡ್ಡಿ ಎಂಬುವರ ಗುತ್ತಿಗೆದಾರನ ದೂರಿನ ಆಧಾರದ ಮೇಲೆ ದಾಳಿ ನಡೆಸಿದಾಗ ಗಜೇಂದ್ರಗಡ ಹೊರವಲಯದ ಡಾಬಾ ಒಂದರಲ್ಲಿ 1 ಲಕ್ಷ 50 ಸಾವಿರ ರೂ ಲಂಚ ಸ್ವೀಕರಿಸುತ್ತಿರುವುದು ಕಂಡುಬಂದಿದ್ದು ರೋಣ ಶಿಶು ಅಭಿವೃದ್ಧಿ ಯೋಜನೆ ನಿರ್ದೇಶಕಿ ಬಸಮ್ಮ ಹೂಲಿ ಹಾಗೂ ಸಿಬ್ಬಂದಿ ಜಗದೀಶ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಡಿವೈಎಸ್ಪಿ ಶಂಕರ್ ರಾಗಿ, ಸಿಪಿಐ ರವಿ ಪುರುಷೋತ್ತಮ ನೇತೃತ್ವದಲ್ಲಿ ದಾಳಿ ನಡೆದಿದ್ದು ಅಧಿಕಾರಿ ಹಾಗೂ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಗದಗ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿದೆ.