ಮದ್ದೂರು : ತಾಲ್ಲೂಕಿನ ಮಣಿಗೆರೆ ಬಳಿ ಕಾರು ಹಾಗೂ ಗೂಡ್ಸ್ ಆಟೋ ನಡುವೆ ನಡೆದ ಅಪಘಾತದಲ್ಲಿ ೨೮ ಜನ ಗಾಯಗೊಂಡಿದ್ದು, ಮೂವರು ಗಂಭೀರಗಾಗಿ ಸ್ಥಿತಿಯಲ್ಲಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮದ್ದೂರು ಕ್ಷೇತ್ರದ ಶಾಸಕ ಉದಯ್ ಸೇರಿದಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಖುದ್ದು ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ರಸ್ತೆ ಅಪಘಾತ ಎಲ್ಲರಿಗೂ ಗಾಯಗಳಾಗಿವೆ, ಯಾವುದೇ ಪ್ರಾಣಾಪಯವಾಗಿಲ್ಲ. ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಎಲ್ಲರಿಗೂ ಸಹ ಚಿಕಿತ್ಸೆ ವೆಚ್ಚ ಭರಿಸುತ್ತೇವೆ. ಗೂಡ್ಸ್ ಗಾಡಿಯಲ್ಲಿ ಹೆಚ್ವು ಜನರಿದ್ದ ಕಾರಣ ಗಾಯಗಳು ಆಗಿವೆ. ಗೂಡ್ಸ್ ಗಾಡಿಗಳಲ್ಲಿ ಜನರು ಸಾಗಿಸುವುದು ತಪ್ಪು. ಇದರ ಬಗ್ಗೆ ಕ್ರಮ ವಹಿಸಲಾಗುತ್ತದೆ ಎಂದು ಶಾಸಕ ಉದಯ್ ತಿಳಿಸಿದರು.