Wednesday, April 9, 2025
Google search engine

Homeರಾಜ್ಯಬೆಂಗಳೂರು: ಕಾರು-ಲಾರಿ ನಡುವೆ ಮಧ್ಯೆ ಅಪಘಾತ, ಮಹಿಳೆ, ಮಗು ಸಾವು

ಬೆಂಗಳೂರು: ಕಾರು-ಲಾರಿ ನಡುವೆ ಮಧ್ಯೆ ಅಪಘಾತ, ಮಹಿಳೆ, ಮಗು ಸಾವು

ಬೆಂಗಳೂರು: ಕಾರು ಹಾಗೂ ಲಾರಿ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಹಾಗೂ ಮಗು ಸಾವನ್ನಪ್ಪಿರುವ ಘಟನೆ ಇಂದು ನಸುಕಿನ ಜಾವ ನೈಸ್​ ರಸ್ತೆಯ ಸೋಂಪುರ ಕ್ಲೋವರ್​ ಲೀಪ್​ ಬಳಿ ನಡೆದಿದೆ.

ಗಂಡ – ಹೆಂಡತಿ ಹಾಗೂ ಮಕ್ಕಳು ಪ್ರಯಾಣಿಸುತ್ತಿದ್ದ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಎರಡು ವರ್ಷದ ಮಗು ಹಾಗೂ ತಾಯಿ ಸಾವನ್ನಪ್ಪಿದ್ದು, ಇನ್ನೊಂದು ಮಗು ಹಾಗೂ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾವನ್ನಪ್ಪಿದ ಮಹಿಳೆಯನ್ನು ಸಿಂಧು (31) ಎಂದು ಗುರುತಿಸಲಾಗಿದ್ದು, ಪತಿ ಮಹೇಂದ್ರನ್ ಹಾಗೂ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೇಲಂ ಮೂಲದ ದಂಪತಿ ಸಿಂಧು ಹಾಗೂ ಮಹೇಂದ್ರನ್​ ರಾಮಮೂರ್ತಿ ನಗರ ಸಮೀಪ ವಿಜಿನಾಪುರದಲ್ಲಿ ವಾಸವಿದ್ದರು. ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ಕಾರು ತೆರಳುತಿದ್ದು, ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಕಾರು ಢಿಕ್ಕಿಯಾಗಿದೆ.

ಅಪಘಾತದ ರಭಸಕ್ಕೆ ಕಾರಿಗೆ ಬೆಂಕಿ ತಗುಲಿದ್ದು, ಲಾರಿ ಸಹ ಪಲ್ಟಿಯಾಗಿದೆ. ನಿದ್ದೆಯ ಮಂಪರಿನಲ್ಲಿ ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ.

ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular