ಗುಂಡ್ಲುಪೇಟೆ: ಗೂಡ್ಸ್ ಆಟೋ ಹಾಗೂ ಪಿಕ್ ಅಪ್ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಪಿಕ್ ಅಪ್ ವಹನ ಚಾಲಕನಿಗೆ ತೀವ್ರತರವಾದ ಗಾಯಗಳಾಗಿರುವ ಘಟನೆ ತಾಲೂಕಿನ ಹಿರೀಕಾಟಿ ಗೇಟ್ ಬಳಿ ನಡೆದಿದೆ.
ಸುತ್ತೂರಿನ ಶಿವಕುಮಾರ್(32) ಗಾಯಾಳುವಾಗಿದ್ದು, ಅತೀ ವೇಗದಿಂದ ಎರಡು ವಾಹನಗಳು ಬಂದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಮಾಹಿತಿ ಅರಿತ ಬೇಗೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುವನ್ನು ಬೇಗೂರಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯಿಂದ ಎರಡು ವಾಹನಗಳು ಕೂಡ ಜಖಂ ಆಗಿದೆ.
ಇನ್ನೂ ಘಟನೆ ಸಂಬಂಧ ಎರಡು ವಾಹನಗಳನ್ನು ವಶಕ್ಕೆ ಪಡೆದ ಬೇಗೂರು ಠಾಣೆ ಪೊಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.