ಕುಷ್ಟಗಿ: ಕಲಾಲಬಂಡಿ ಗ್ರಾಮದ ಹೊರವಲಯದ ರಸ್ತೆಯ ತಿರುವಿನಲ್ಲಿಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಂದಕದಲ್ಲಿ ಬಿದ್ದು ಬಿಜೆಪಿ ಕಾರ್ಯಕರ್ತ ಸಾವನ್ನಪ್ಪಿದ್ದಾರೆ.
ಕಲಾಲಬಂಡಿ ಗ್ರಾಮದ ಬಿಜೆಪಿ ಕಾರ್ಯಕರ್ತ ಶರಣಪ್ಪ ಪರಸಪ್ಪ ಹಿರೇಮನಿ (37) ದುರ್ಮರಣಕ್ಕೀಡಾದ ವ್ಯಕ್ತಿ.
ಶರಣಪ್ಪ ಕಳೆದ ಸೋಮವಾರ ಜೂ.27 ರಂದು ರಾತ್ರಿ ಬೈಕ್ ನಲ್ಲಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಕುಷ್ಟಗಿ ಠಾಣೆಯ ಪಿಎಸ್ ಐ ಮೌನೇಶ ರಾಠೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೃತ ಶರಣಪ್ಪ ಹಿರೇಮನಿ ಅವರ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.