ಮಲ್ಪೆ: ಕಂಟೈನರ್ ಲಾರಿಯಿಂದ ಗ್ರಾನೈಟ್ ಇಳಿಸುವ ವೇಳೆ ನಡೆದ ಅವಘಡದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಗುರುವಾರ ಉಡುಪಿ ಜಿಲ್ಲೆಯ ಮಲ್ಪೆ ಬಳಿಯ ತೊಟ್ಟಂನಲ್ಲಿ ನಡೆದಿದೆ.
ಮೃತ ಕಾರ್ಮಿಕರನ್ನು ಒಡಿಶಾ ಮೂಲದ ಬಾಬುಲ್ಲ (38) ಮತ್ತು ಭಾಸ್ಕರ (40) ಎಂದು ಗುರುತಿಸಲಾಗಿದೆ.
ತೊಟ್ಟಂನ ಕರಾವಳಿ ಯುವಕ ಮಂಡಳಿಯ ಬಳಿಕ ಮನೆಯೊಂದಕ್ಕೆ ಗ್ರಾನೈಟ್ ತರಲಾಗಿತ್ತು. ಇದನ್ನು ಇಳಿಸುವ ವೇಳೆ ಆಯತಪ್ಪಿ ಗ್ರಾನೈಟ್ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈಶ್ವರ್ ಮಲ್ಪೆ ತಂಡದವರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದರು. ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.