Saturday, April 19, 2025
Google search engine

Homeರಾಜ್ಯಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಎರಡು ಎಮ್ಮೆ ಸಾವು

ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಎರಡು ಎಮ್ಮೆ ಸಾವು

ತುಮಕೂರು:  ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಎರಡು ಎಮ್ಮೆ ಸಾವನ್ನಪ್ಪಿದ್ದು, ಮೂರು ಎಮ್ಮೆಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಪರಮಸಂದ್ರ ಗ್ರಾಮದಲ್ಲಿ ನಡೆದಿದೆ.

ತಡರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ತಲಾ 60 ರಿಂದ 70 ಸಾವಿರ ರೂಪಾಯಿ ಮೌಲ್ಯದ ಎಮ್ಮೆಗಳು ಇವಾಗಿವೆ.

ಗ್ರಾಮದ ಯೋಗೇಶ್ ಎಂಬುವವರಿಗೆ ಸೇರಿರುವ ಎಮ್ಮೆಗಳು ಮೃತಪಟ್ಟಿದ್ದು, ಈ ಎಮ್ಮೆಗಳ ಹಾಲನ್ನೇ ಮಾರಿಕೊಂಡು ಯೋಗೇಶ್ ಕುಟುಂಬ ಜೀವನ ಸಾಗಿಸುತ್ತಿತ್ತು.

ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular