Friday, April 18, 2025
Google search engine

Homeಅಪರಾಧತುಮಕೂರಿನಲ್ಲಿ ಪಟಾಕಿ ಗೋದಾಮಿಗೆ ಆಕಸ್ಮಿಕ ಬೆಂಕಿ

ತುಮಕೂರಿನಲ್ಲಿ ಪಟಾಕಿ ಗೋದಾಮಿಗೆ ಆಕಸ್ಮಿಕ ಬೆಂಕಿ

ತುಮಕೂರು : ಪಟಾಕಿ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿರುವ ಘಟನೆ ತುಮಕೂರು ನಗರದ ಮಂಡಿಪೇಟೆಯಲ್ಲಿ ಈ ಒಂದು ಬೆಂಕಿ ಅವಘಡ ಸಂಭವಿಸಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಈ ಮೂಲಕ ಭಾರಿ ಅನಾಹುತ ತಪ್ಪಿದಂತಾಗಿದೆ.

ಇಂದು ಸೋಮವಾರ ಈ ಒಂದು ಅಗ್ನಿ ದುರಂತ ಸಂಭವಿಸಿದ್ದು, ಅಗ್ನಿಯ ಜ್ವಾಲೆ ಪಕ್ಕದ ಪ್ಲಾಸ್ಟಿಕ್ ಅಂಗಡಿ, ಗ್ರಂಥಿಗೆ ಅಂಗಡಿಯ ಗೋದಾಮಿಗೂ ವ್ಯಾಪಿಸಿತು. ಮೆಟ್ರೋ ಮುಂಭಾಗದಲ್ಲಿರುವ ನೇತಾಜಿ ಸ್ಟೋರ್ ಗೋದಾಮಿನಲ್ಲಿ ಪಟಾಕಿ, ಗ್ರಂಥಿಗೆ, ಸ್ಟೇಷನರಿ ಪ್ಲಾಸ್ಟಿಕ್ ವಸ್ತುಗಳ ಮಳಿಗೆಗಳಿವೆ. ರಾಮಕೃಷ್ಣ ಎಂಬವರಿಗೆ ಸೇರಿದ ಮಳಿಗೆಗಳು ಇವಾಗಿವೆ ಎಂದು ತಿಳಿಬಂದಿದೆ.

ಅಕ್ರಮವಾಗಿ ಪಟಾಕಿ ಶೇಖರಿಸಿಟ್ಟಿದ್ದರಿಂದ ಅನಾಹುತ ಸಂಭವಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ನಿರಂತರವಾಗಿ ಪಟಾಕಿಗಳು ಸ್ಫೋಟಗೊಂಡಿದ್ದು ಜನರಲ್ಲಿ ಕೆಲಕಾಲ ಆತಂಕ ಉಂಟುಮಾಡಿತ್ತು. ಗೋದಾಮಿಗೆ ಹೊಂದಿಕೊಂಡಂತೆ ಮನೆಗಳಿಗು ಕೂಡ ಹಾನಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಮಂಡಿಪೇಟೆ ರಸ್ತೆಯಲ್ಲಿ ಎರಡು ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular