ಹನಗೋಡು: ತಂಬಾಕು ಹದ ಮಾಡುವ ವೇಳೆ ಬ್ಯಾರನ್‌ಗೆ ಆಕಸ್ಮಿಕ ಬೆಂಕಿ ತಗುಲಿ ತಂಬಾಕು ಸೇರಿದಂತೆ ಬ್ಯಾರೆನ್ ಹಾನಿಯಾಗಿರುವ ಘಟನೆ ನಡೆದಿದೆ.
ಹನಗೋಡು ಹೋಬಳಿಯ ಬಿ ಆರ್ ಕಾವಲ್ ಗ್ರಾಮದ ಜಯಮ್ಮ ರಾಜೇಗೌಡ ರಿಗೆ ಸೇರಿದ ಸೇರಿದ ೧೩*೧೩ ಅಳತೆಯ ಸಿಂಗಲ್ ಬ್ಯಾರನ್‌ನಲ್ಲಿ ಸೋಮವಾರ ರಾತ್ರಿ ತಂಬಾಕು ಎಲೆಗಳು ಹದಗೊಳ್ಳುತ್ತಿದ್ದ ಸಮಯದಲ್ಲಿ ಅಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಬ್ಯಾರೆನ್ ತುಂಬಾ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡ ತಕ್ಷಣ ಗ್ರಾಮಸ್ಥರು ಬಂದು ಬೆಂಕಿ ನಂದಿಸಿಸುವ?ರಲ್ಲಿ ತಂಬಾಕು ಹಾಗೂ ಬ್ಯಾರೆನ್ ಸಂಪೂರ್ಣ ಹಾನಿಯಾಗಿದೆ. ನ?ಕ್ಕೊಳಗಾದ ತಂಬಾಕು ಬ್ಯಾರನ್ ಮಾಲೀಕರಿಗೆ ಮಂಡಳಿವತಿಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ತಂಬಾಕು ಮಂಡಳಿಯನ್ನು ಒತ್ತಾಯಿಸಿದ್ದಾರೆ.