ಮೈಸೂರು: ಜಿಲ್ಲೆಯ ನಂಜನಗೂಡಿನ ಹಂಡುವಿನಹಳ್ಳಿ ಗ್ರಾಮದ ಸಾಮಾಜಿಕ ಅರಣ್ಯ ವಲಯದಲ್ಲಿ ಆಕಸ್ಮಿಕ ಬೆಂಕಿ ತಗುಲಿದ್ದು, ೫೦ ಕ್ಕೂ ಹೆಚ್ಚು ಎಕರೆ ಪ್ರದೇಶ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಬೆಂಕಿ ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇನ್ನು ೧೫೦ ಎಕರೆ ಪ್ರದೇಶದಲ್ಲಿ ಈ ಕುರುಚಲು ಅರಣ್ಯ ಪ್ರದೇಶ ಇದ್ದು, ಅಕ್ರಮವಾಗಿ ಮಣ್ಣು ಸಾಗಾಟ ಮಾಡುವ ಲ್ಯಾಂಡ್ ಮಾಫಿಯ ಕಿಡಿಗೇಡಿಗಳಿಂದ ಈ ಕೃತ್ಯ ನಡೆದಿದೆ ಎಂದ ಆರೋಪ ಕೇಳಿಬಂದಿದೆ.
ನಂಜನಗೂಡು ಪಟ್ಟಣ ಮೈಸೂರು ಸೇರಿದಂತೆ ಕೇರಳ ರಾಜ್ಯಕ್ಕೆ ಈ ಪ್ರದೇಶದ ವ್ಯಾಪ್ತಿಯಲ್ಲಿ ನಿರಂತರವಾಗಿ ಅಕ್ರಮ ಮಣ್ಣು ಸಾಗಾಟವಾಗುತ್ತಿರುವ ಬಗ್ಗೆ ದೂರು ಕೂಡ ದಾಖಲಿಸಲಾಗಿದೆ. ಜೊತೆಗೆ ಈ ಕುರುಚಲು ಅರಣ್ಯ ಪ್ರದೇಶವು, ಅತಿ ಹೆಚ್ಚು ಜಿಂಕೆ ಮತ್ತು ನವಿಲುಗಳ ತಾಣ ಎಂದು ಪ್ರಸಿದ್ಧಿ ಪಡೆದಿದೆ. ಹೀಗಿರುವಾ ಅರಣ್ಯ ಇಲಾಖೆ ಇತ್ತ ಗಮನಹರಿಸಬೇಕಿತ್ತು. ಆದರೆ, ಬೆಂಕಿ ಬಿದ್ದರೂ ಕೂಡ ಅದನ್ನು ನಂದಿಸುವಲ್ಲಿ ನಂಜನಗೂಡು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದೆ.