ಮಂಡ್ಯ: ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿ ಭಸ್ಮವಾಗಿರುವ ಘಟನೆ ತಾಲ್ಲೂಕಿನ ಹಳೇ ಬೂದನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಬಿ.ಎಸ್.ಮಧು ಎಂಬುವವರಿಗೆ ಸೇರಿದ ಹುಲ್ಲಿನ ಮೆದೆ ಬೆಂಕಿಗೆ ಸುಟ್ಟುಹೋಗಿದೆ. ಜಮೀನಿನ ಬಳಿಯೇ ಹುಲ್ಲಿನ ಮೆದೆ ಹಾಕಿದ್ದರು. ಅಲ್ಲಿಂದ ಜಾನುವಾರುಗಳಿಗೆ ನಿತ್ಯವೂ ಮೇವು ತರುತ್ತಿದ್ದರು.
ಆಕಸ್ಮಿಕವಾಗಿ ಬೆಂಕಿ ತಗುಲಿ ದುರ್ಘಟನೆ ಸಂಭವಿಸಿದ್ದು, ಸುಮಾರು ಒಂದೂವರೆ ಎಕರೆಯ ಹುಲ್ಲು ಬೆಂಕಿಗೆ ನಾಶವಾಗಿದ್ದು, ಒಂದು ಲಕ್ಷ ರೂ. ನಷ್ಟವಾಗಿದೆ.
ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ನೊಂದ ರೈತರಿಗೆ ಸೂಕ್ತ ಪರಿಹಾರಕ್ಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.