ಪಿರಿಯಾಪಟ್ಟಣ: ತಾಲೂಕಿನ ಚಪ್ಪರದಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ವತಿಯಿಂದ ಹಾರನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ಖಾತೆ ಅಭಿಯಾನ ನಡೆಯಿತು.
ಈ ವೇಳೆ ಶಾಖಾ ವ್ಯವಸ್ಥಾಪಕರಾದ ಬಿ.ಕೆ ರಮೇಶ್ ಅವರು ಮಾತನಾಡಿ ಯಾವುದೇ ಸೇವಾ ಹಾಗೂ ಕನಿಷ್ಠ ಶುಲ್ಕವಿಲ್ಲದೆ ಪ್ರತಿಯೊಬ್ಬರು ಬ್ಯಾಂಕ್ ಖಾತೆ ಹೊಂದಿರಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜನ್ ಧನ್ ಯೋಜನೆ ಜಾರಿಗೆ ತಂದಿದ್ದೆ ಶಾಲಾ ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ಹೊಂದುವುದರಿಂದ ತಮ್ಮ ವಿದ್ಯಾರ್ಥಿ ವೇತನ ಹಣ ಪಡೆಯಲು ಅನುಕೂಲವಾಗುತ್ತದೆ ಹಾಗೂ ಸಾರ್ವಜನಿಕರು ಸಹ ಈ ಯೋಜನೆ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು. ಈ ಸಂದರ್ಭ ಶಾಲೆಯ ಮುಖ್ಯಶಿಕ್ಷಕ ಕೆ.ಸಿ ಸತೀಶ್, ಶಿಕ್ಷಕರಾದ ಚಂದ್ರಶೇಖರ್, ಸಚಿನ್, ನಾಗರತ್ನ, ಬ್ಯಾಂಕ್ ಸಿಬ್ಬಂದಿ ಪುನೀತ್, ಸುನೀಲ್ ಹಾಗೂ ವಿದ್ಯಾರ್ಥಿಗಳು ಇದ್ದರು.