Friday, May 1, 2026
Google search engine

Homeರಾಜ್ಯಮಹಿಳೆಯರಿಗೆ ಬ್ಲ್ಯಾಕ್​ಮೇಲ್ ಮಾಡಿ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್​​

ಮಹಿಳೆಯರಿಗೆ ಬ್ಲ್ಯಾಕ್​ಮೇಲ್ ಮಾಡಿ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್​​

ಬೆಂಗಳೂರು: ಹಲವು ಮಹಿಳೆಯರಿಗೆ ಬ್ಲ್ಯಾಕ್​ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೊಪದ ಮೆಲೆ ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನನ್ನು ಬೆಂಗಳೂರಿನ ಆರ್.ಆರ್.ನಗರ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಸದ್ಯ ಆರೋಪಿ ಚಂದ್ರೇಗೌಡ ಬಂಧಿತನಾಗಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅವುಗಳನ್ನು ಈತ ವಿಡಿಯೋ ಮಾಡಿಟ್ಟುಕೊಳ್ಳುತ್ತಿದ್ದ. ಬಳಿಕ ಆ ಫೋಟೋ, ವಿಡಿಯೋ ಇಟ್ಟುಕೊಂಡು ಮಹಿಳೆಯರಿಗೆ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಜೊತೆಗೆ ತಾನು ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಎಂದು ಬಿಂಬಿಸಿ, ನಕಲಿ ಐಡಿ ಮಾಡಿಕೊಂಡು ಹಲವರಿಗೆ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ.

ಇನ್ನು ಆರೋಪಿ ಮೊಬೈಲ್​​ ಪರಿಶೀಲಿಸಿದಾಗ 20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ, ಫೋಟೋ ಪತ್ತೆಯಾಗಿವೆ. ಗಂಡನಿಂದ ದೂರವಾಗಿದ್ದ ಮಹಿಳೆ ಪರಿಚಯ ಮಾಡಿಕೊಂಡಿದ್ದ ಆರೋಪಿ, ಆಕೆಗೆ ನಾನು ಲೆಕ್ಚರ್ ಎಂದು ಪರಿಚಯ ಮಾಡಿಕೊಂಡಿದ್ದ. ನನಗೆ ಡಿವೋರ್ಸ್ ಆಗಿದ್ದು, ನಿನ್ನನ್ನು ಮದುವೆ ಆಗುತ್ತೇನೆಂದು ನಂಬಿಸಿ ಆಕೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದ. ಖಾಸಗಿ ಕ್ಷಣವನ್ನು ವಿಡಿಯೋ ಮಾಡಿಕೊಂಡಿದ್ದ ಚಂದ್ರೇಗೌಡ ಅದನ್ನು ಇಟ್ಟುಕೊಂಡು ಮಹಿಳೆಗೆ ಹೆದರಿಸಿ ಆಕೆಯಿಂದ 5 ಲಕ್ಷ ಹಣ ಪಡೆದಿದ್ದ ಎಂದು ದೂರಲಾಗಿದೆ.

ಸಂತ್ರಸ್ತ ಮಹಿಳೆ ಒಮ್ಮೆ ಚಂದ್ರೇಗೌಡನ ಮೊಬೈಲ್ ಪರಿಶೀಲಿಸಿದ್ದ ವೇಳೇ ಆಕೆಗೆ ಶಾಕ್​​ ಆಗಿದ್ದು, ಮೊಬೈಲ್​​ನಲ್ಲಿ ಹಲವು ಮಹಿಳೆಯರ ವಿಡಿಯೋ, ಚಾಟಿಂಗ್ ಪತ್ತೆಯಾಗಿತ್ತು. ಹೀಗಾಗಿ ಆರೋಪಿ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇನ್ನು ದೂರುದಾರ ಮಹಿಳೆಯನ್ನು ಮದುವೆಯಾಗಿ ನಂಬಿಸಿದ್ದ ಆರೋಪಿ ವಿವಾಹವಾಗಿದ್ದೇನೆ ಎಂದು ನಂಬಿಸಲು ಆಕೆಯ ಕೊರಳಿಗೆ ಅರಿಶಿನದ ಕೊಂಬನ್ನೂ ಕಟ್ಟಿದ್ದ. ಸಂತ್ರಸ್ತೆಯ ಆಧಾರ್​​ ಕಾರ್ಡ್​​ ಕೂಡ ಪಡೆದಿದ್ದ ಈತ ತಾನು ಆಕೆಯ ಗಂಡನೆಂದು ಬಿಂಬಿಸಿ ಮಾಡಿಗೆ ಮನೆಯೊಂದಕ್ಕೆ ಕರಾರು ಪತ್ರವನ್ನೂ ಮಾಡಿಸಿದ್ದ. ತನ್ನ ತಾಯಿಯನ್ನೂ ಸಂತ್ರಸ್ತೆಯ ಮನೆಯಲ್ಲೇ ಆತ ಬಿಟ್ಟಿದ್ದು, ವರ್ಷಾನುಗಟ್ಟಲೆ ಆಕೆಯ ಆರೈಕೆಯನ್ನು ದೂರುದಾರ ಮಹಿಳೆ ಮಾಡಿದ್ದಾಳೆ ಎನ್ನಲಾಗಿದೆ. ಸಾಲದ್ದಕ್ಕೆ ಸಂತ್ರಸ್ತೆಯ ಮಗಳ ವ್ಯಾಸಂಗ ಸಂಬಂಧಿತ ದಾಖಲಾತಿಗಳನ್ನೂ ಬದಲಾಯಿಸಿ, ತಾನೇ ಮಹಿಳೆಯ ಗಂಡ ಎಂದು ಬಿಂಬಿಸಲು ಹೊರಟಿದ್ದ ಎಂದು ಆರೋಪಿಸಲಾಗಿದೆ.

RELATED ARTICLES
- Advertisment -
Google search engine

Most Popular