Monday, April 7, 2025
Google search engine

Homeಅಪರಾಧಫೋನ್ ಪೇ ಮೂಲಕ ಲಂಚ ಸ್ವೀಕರಿಸಿದ ಆರೋಪ: ಗ್ರಾಮ ಲೆಕ್ಕಿಗನಿಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿ                      

ಫೋನ್ ಪೇ ಮೂಲಕ ಲಂಚ ಸ್ವೀಕರಿಸಿದ ಆರೋಪ: ಗ್ರಾಮ ಲೆಕ್ಕಿಗನಿಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿ                      

ನಾಗಮಂಗಲ:  ತಾಲೂಕಿನ ಬಿಂಡಿಗನವಿಲೆ ನಾಡಕಛೇರಿ ಲಾಳನಕೆರೆ ವೃತ್ತದ ಗ್ರಾಮ ಲೆಕ್ಕಿಗ ನಿಂಗಪ್ಪ ಸುರಪುರ ಎಂಬುವವರು ಲಾಳನಕೆರೆ ಗ್ರಾಮದ ಮಹಿಳೆ ಮೀನಾಕ್ಷಿ ಎಂಬುವವರ ಬಳಿ ಜಂಟಿ ಖಾತೆ ಮಾಡಿಕೊಡಲು 66 ಸಾವಿರ ರೂಗಳನ್ನ 5 ಕಂತುಗಳಲ್ಲಿ, ಫೋನ್ ಪೇ ಹಾಗೂ ನೇರವಾಗಿ ಪಡೆದ ಆರೋಪ ಕೇಳಿಬಂದಿದೆ.       

ಈ ಸಂಬಂಧ ನೊಂದ ಮಹಿಳೆ ಮೀನಾಕ್ಷಿ ನಾಗಮಂಗಲ ತಹಶೀಲ್ದಾರ ಹಾಗೂ ಮಂಡ್ಯ ಜಿಲ್ಲಾಧಿಕಾರಿ ದೂರು ನೀಡಿದ್ದು, ಗ್ರಾಮಲೆಕ್ಕಿಗ ನಿಂಗಪ್ಪ   ಸುರಪುರ ಗೆ ಜಿಲ್ಲಾಧಿಕಾರಿ ಡಾ. ಕುಮಾರ್ ತುರ್ತು ನೋಟಿಸ್ ಜಾರಿ ಮಾಡಿದ್ದಾರೆ.

ಮಹಿಳೆಯ ಆರೋಪಕ್ಕೆ ಉತ್ತರಿಸಬೇಕಾದ ನಿಂಗಪ್ಪ ಸುರಪುರ ಕಳೆದ 5 ದಿನದಿಂದ ಕಚೇರಿಗೆ ಗೈರು ಹಾಜರಾಗಿದ್ದು, ನನಗೆ ನ್ಯಾಯ ಒದಗಿಸಿ ಕೊಡಬೇಕೆಂದು ನೊಂದ ಮಹಿಳೆ ಮನವಿ ಮಾಡಿದ್ದಾರೆ.                  

ಗ್ರಾಮ ಲೆಕ್ಕಿಗ ನಿಂಗಪ್ಪ ಸುರಪುರ ವಿರುದ್ಧ ನೇರ ಆರೋಪ ಮಾಡಿರುವ ಮೀನಾಕ್ಷಿ, ನಾನು ಮೈಸೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ನನ್ನ ಮಾವ ಚುಂಚೇಗೌಡರ ಜಮೀನನ್ನು ನನ್ನ ಗಂಡ ನಿಂಗಪ್ಪ ಮತ್ತು ಅವರ ಸಹೋದರ ಹೆಸರಿಗೆ ಜಂಟಿ ಖಾತೆ ಮಾಡಿಕೊಡಲು ಸೂಕ್ತ ದಾಖಲಾತಿಗಳೊಂದಿಗೆ ತೆರಳಿದಾಗ ಖಾತೆ ಮಾಡಿಕೊಳ್ಳಲು 66ಸಾವಿರ ಹಣ ಕೇಳಿ, ಮರಣ- ಜನನ ಪತ್ರಕ್ಕೆoದು ನನ್ನ ಬಳಿ ಮೊದಲ ಬಾರಿಗೆ 26 ಸಾವಿರ ರೂ.ಗಳನ್ನ ಪಡೆದರು.

ನಂತರ ಕಂತುಗಳಲ್ಲಿ 66 ಸಾವಿರ ರೂ.ಗಳನ್ನು ಪಡೆದಿದ್ದಾರೆ. ಕಳೆದ ಒಂದು ವರ್ಷದಿಂದ ಖಾತೆ ಮಾಡಿಕೊಡಲು ಸತಾಯಿಸುತ್ತಿದ್ದು ನನಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular