ಬೆಂಗಳೂರು: ಸಿನಿಮಾದಲ್ಲಿ ಚಾನ್ಸ್ ನೀಡುವುದಾಗಿ ವಂಚನೆ ಮಾಡಿರುವ ಆರೋಪ ‘ರಂಗಿನ ರಾಟೆ’ ಸಿನಿಮಾದ ನಿರ್ದೇಶಕ ಸಂತೋಷ್ ವಿರುದ್ಧ ಕೇಳಿ ಬಂದಿದ್ದು ಸಂತ್ರಸ್ತ ಯುವತಿ ನಿರ್ದೇಶಕನ ವಿರುದ್ಧ ದೂರು ನೀಡಿದ್ದಾರೆ. ಗೂಗಲ್‌ಪೇ, ಫೋನ್ಪೇ ಮೂಲಕ ಹಣ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ ಎಂದು ಯಶವಂತಪುರ ಪೊಲೀಸ್ ಠಾಣೆಗೆ ಸಂತ್ರಸ್ತ ಯುವತಿ ದೂರು ನೀಡಿದ್ದಾರೆ.
ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ ನಿರ್ದೇಶಕ ಸಂತೋಷ್ ಅದನ್ನೇ ನೆಪ ಮಾಡಿಕೊಂಡು ಹಂತ ಹಂತವಾಗಿ ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ಪೊಲೀಸರಿಂದ ತನಿಖೆ ನಡೆಯುತ್ತಿದೆ.