Wednesday, April 9, 2025
Google search engine

Homeರಾಜಕೀಯಕಾಂಗ್ರೆಸ್‌ ಶಾಸಕರಿಗೆ ಪಕ್ಷ ಬಿಟ್ಟು ಬರಲು ಆಫರ್‌ ಆರೋಪ; ಶಾಸಕ ಗಣಿಗ ರವಿಕುಮಾರ್ ವಿರುದ್ಧ ಬಿಜೆಪಿ...

ಕಾಂಗ್ರೆಸ್‌ ಶಾಸಕರಿಗೆ ಪಕ್ಷ ಬಿಟ್ಟು ಬರಲು ಆಫರ್‌ ಆರೋಪ; ಶಾಸಕ ಗಣಿಗ ರವಿಕುಮಾರ್ ವಿರುದ್ಧ ಬಿಜೆಪಿ ದೂರು

ಮಂಡ್ಯ: ಬಿಜೆಪಿಯ ಕೇಂದ್ರ ನಾಯಕರು ಕಾಂಗ್ರೆಸ್‌ ಪಕ್ಷದ ಶಾಸಕರಿಗೆ ಪಕ್ಷ ಬಿಟ್ಟು ಬರಲು ₹100 ಕೋಟಿ ಆಫರ್‌ ಒಡ್ಡುತ್ತಿದ್ದಾರೆ ಎಂದು ಆಧಾರರಹಿತ ಮತ್ತು ದುರುದ್ದೇಶಪೂರ್ವಕವಾಗಿ ಆರೋಪ ಮಾಡಿರುವ ಮಂಡ್ಯ ಶಾಸಕ ಪಿ.ರವಿಕುಮಾರ್‌ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಮತ್ತು ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್‌ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮಂಡ್ಯ ಪಶ್ಚಿಮ ಪೊಲೀಸ್‌ ಠಾಣೆಗೆ ಸೋಮವಾರ ದೂರು ನೀಡಿದರು.

ಕಾಂಗ್ರೆಸ್‌ ಸರ್ಕಾರ ಪತನಗೊಳಿಸಲು ಆಪರೇಷನ್‌ ಕಮಲ ನಡೆಸುತ್ತಿದ್ದಾರೆ ಎಂದು ಬಿಜೆಪಿಯ ಕೇಂದ್ರ ನಾಯಕರ ವಿರುದ್ಧ ಸುಳ್ಳು ಹೇಳಿಕೆ ನೀಡಲಾಗಿದೆ. ಇದರಿಂದ ಬಿಜೆಪಿ ವರ್ಚಿಸ್ಸಿಗೆ ಧಕ್ಕೆಯಾಗುವ ಸಂಭವವಿದೆ. ನಾಯಕರ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸಲು ಯತ್ನಿಸಿದ್ದಾರೆ. ಈ ಕಾರಣದಿಂದ ಶಾಸಕ ಗಣಿಗ ರವಿಕುಮಾರ್ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ದೂರಿದ್ದಾರೆ.

‘ಪ್ರಜಾಪ್ರಭುತ್ವವನ್ನು ಬಿಜೆಪಿಯವರು ಹಾಳು ಮಾಡುತ್ತಿದ್ದಾರೆ. ₹2 ಸಾವಿರ ಕೋಟಿ ಆರೋಪ ಮಾಡಿದ್ದ ಶಾಸಕ ಯತ್ನಾಳ್‌ ವಿರುದ್ಧ ಬಿಜೆಪಿ ದೂರು ಕೊಡಲಿ. ಶ್ರೀನಿವಾಸಗೌಡ ವಿರುದ್ಧವೂ ದೂರು ಕೊಡಬೇಕು. ಕಾಂಗ್ರೆಸ್‌ ಶಾಸಕರಿಗೆ ಆಫರ್‌ ನೀಡಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಅದನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಕೊಡುತ್ತೇನೆ. ಯಾವ ಹೋಟೆಲ್‌ನಲ್ಲಿ ಕುಳಿತು ಮಾತನಾಡಿದ್ದಾರೆ ಎಂಬ ದಾಖಲೆ ಕೊಡುತ್ತೇನೆ’ ಎಂದು ಸವಾಲು ಹಾಕಿದರು.

RELATED ARTICLES
- Advertisment -
Google search engine

Most Popular