ಮಂಗಳೂರು (ದಕ್ಷಿಣ ಕನ್ನಡ): 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡದಲ್ಲಿ ಇಂದು ಬಂಧಿಸಲಾಗಿದೆ. 1990 ರಲ್ಲಿ ಸುಳ್ಯ ತಾಲ್ಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ ಅಕ್ರಮ ಕೂಟ ಸೇರಿ ಶಾಂತಪ್ಪ ಮತ್ತು ಸುಬ್ಬಯ್ಯ ರವರಿಗೆ ತಲ್ವಾರ್ ನಿಂದ ಕಡಿದು ತೀವ್ರ ಸ್ವರೂಪದ ರಕ್ತ ಗಾಯ ಮಾಡಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಸುಳ್ಯ ಪೊಲೀಸ್ ಠಾಣಾ ಅಕ್ರ. 64/1990 U/s 143,147, 148,324,326,506 r/w 149 ಐಪಿಸಿ ಪ್ರಕರಣದಲ್ಲಿನ್ಯಾಯಾಲಯಕ್ಕೆ ಹಾಜರಾಗದೆ ಎಲ್ ಪಿ ಸಿ 02/2002 ರಲ್ಲಿನ ಆರೋಪಿ ಬಾಲನ್(73) (ನಾಟಿ ಮನೆ, ತ್ರಿಸ್ಸೂರ್ ಜಿಲ್ಲೆ ಕೇರಳ) ಎಂಬಾತನು 35 ವರ್ಷಗಳಿಂದ ತಲೆಮರೆಸಿಕೊಂಡಿದ್ದರು.
ಈತನನ್ನು ಕೇರಳ ರಾಜ್ಯದ ತ್ರಿಸ್ಸೂರ್ ನಿಂದ ದಸ್ತಗಿರಿ ಮಾಡಿ ದಿನಾಂಕ 13.10.2025 ರಂದು ಮಾನ್ಯ ನ್ಯಾಯಧೀಶರು JMFC ನ್ಯಾಯಾಲಯ, ಸುಳ್ಯರವರ ಮುಂದೆ ಹಾಜರು ಪಡಿಸಿದ್ದು ಸದ್ರಿ ಆರೋಪಿಗೆ ಮಾನ್ಯ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.