Monday, September 15, 2025
Google search engine

Homeರಾಜ್ಯಸುದ್ದಿಜಾಲಕೆಎಸ್‌ಆರ್‌ಟಿಸಿ ನೌಕರರ ಸಹಕಾರ ಸಂಘದ ಸಾಧನೆ: 33 ಕೋಟಿ ವಹಿವಾಟು, 50 ಲಕ್ಷ ನಿವ್ವಳ ಲಾಭ:...

ಕೆಎಸ್‌ಆರ್‌ಟಿಸಿ ನೌಕರರ ಸಹಕಾರ ಸಂಘದ ಸಾಧನೆ: 33 ಕೋಟಿ ವಹಿವಾಟು, 50 ಲಕ್ಷ ನಿವ್ವಳ ಲಾಭ: ಎಂ.ಸುರೇಶ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೆ.ಆರ್.ನಗರ ನೌಕರರ ವಿವಿಧೋದ್ದೇಶ ಸಹಕಾರ ಸಂಘ ರಾಜ್ಯದಲ್ಲಿಯೇ 33 ಕೋಟಿ ವಹಿವಾಟು ನಡೆಸಿ 50 ಲಕ್ಷ ನಿವ್ವಳ್ ಲಾಭಗಳಿಸಿ ಮಾದರಿಯಾಗಿ. ಎ ಶ್ರೇಣಿಯಲ್ಲಿ ಸಂಘ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಸಃಘದ ಅಧ್ಯಕ್ಷ ಎಂ.ಸುರೇಶ್ ತಿಳಿಸಿದರು.

ಪಟ್ಟಣದ ವಾಲ್ಮೀಕಿ ಸಮುದಾಯದ ಭವನದಲ್ಲಿ ನಡೆದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಸಾಲಿನ ಚುನಾವಣೆಯಲ್ಲಿ ನಮ್ಮ ತಂಡ ಐದು ಗ್ಯಾರಂಟಿ ಭರವಸೆಯನ್ನು ಕೊಡಲಾಗಿತ್ತು ಅದರಂತೆ ಈ ಸಾಲಿನ ಸರ್ವ ಸದಸ್ಯರ ಸಮುಖದಲ್ಲಿ ಈಡೇರಿಸಲಾಗಿದೆ ಎಂದು ತಿಳಿಸಿದರು.

ಹೊಸ ಸದಸ್ಯರಿಗೆ ಒಂದು ಲಕ್ಷದ ವರೆವಿಗೂ ಸಾಲ, ನಾಲ್ಕು ಲಕ್ಷಕ್ಕೆ ನಿಗದಿಯಾಗಿದ್ದ ಸಾಲವನ್ನು ಒಂದು‌ ಲಕ್ಷ ಹೆಚ್ಚಿಸಿ ಐದೂವರೆ ಲಕ್ಷದ ವರೆಗೆ ಸಾಲ ಕೊಡಲಾಗುತ್ತಿದೆ ಹಾಗೇಯೇ ಮಹಿಳಾ ಸದಸ್ಯರಿಗೆ ಶೇ 7.5% ಬಡ್ಡಿ, ಪುರುಷರಿಗೆ ಶೇ 8% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನಲವತ್ತು ಸಾಬಿರ ಇದ್ದುದನ್ನು ಹತ್ತು ಸಾವಿರ ಹೆಚ್ಷಿಸಿ ಐವತ್ತು ಸಾವಿರ ಮಾಡಲಾಗಿದೆ ಹಾಗೂ ನಿವೃತ್ತ ಪಡೆದವರಿಗ ಹಾಗೂ ಸದಸತ್ವ ವಾಪಸ್ಸು ಪಡೆದವರಿಗೆ ಮರಣ ನಿಧಿ ಶೇ 75 % ವಾಪಸ್ಸ್ ಕೊಡಲಾಗುವುದು ಎಂದು ನುಡಿದಂತೆ ಐದು ಗ್ಯಾರಂಟಿ ಭರವಸೆಯನ್ನು ಈಡೇರಿಸಿದ್ಸೇವೆ ಎಂದರಲ್ಲದೆ ನಿವೇಶನ ಖರೀದಿಸಲು ನಾಲ್ಕು ಲಕ್ಷದ ವರೆವಿಗೂ ಸಾಲ ನೀಡಲಾಗುವುದು ಎಂದು ಅಧ್ಯಕ್ಷ ಎಂ.ಸುರೇಶ್ ಮಾಹಿತಿ‌‌ ನೀಡಿದರು.

ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿ ಹಾಗು ಪದವಿ, ವೃತ್ತಿಪರ ಶಿಕ್ಷಣ, ಸ್ನಾತಕೋತ್ತರ ಪದವಿ ಪಡೆದವರಿಗೂ ನಗದು‌ ಪತ್ರಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕೆಎಸ್.ಆರ್.ಟಿ.ಸಿ. ಸಂಸ್ಥೆಯ ಮೈಸೂರು ವಿಭಾಗದ ವಿಭಾಗೀಯ ತಾಂತ್ರಿಕ ಅಭಿಯಂತರ ಪಿ.ಮಹೇಶ್, ಪಟ್ಟಣದ ಬಸ್ ಘಟಕದ ವ್ಯವಸ್ಥಾಪಕ ಎ.ಡಿ.ಕುಮಾರ್, ಸಹಾಯಕ ಸಂಚಾರ ಅಧೀಕ್ಷಕಿ ರಾಜೇಶ್ವರಿ, ಮಾಜಿ ಅಧ್ಯಕ್ಷ ರಾಜೇಗೌಡ ಸಂಘದ ಗೌರವಾಧ್ಯಕ್ಣ ಶಿವಾನಂದ ಕುಂಬಾರ, ಉಪಾಧ್ಯಕ್ಷ ಹೆಚ್.ಪಿ. ಪ್ರವೀಣ, ನಿರ್ಧೆಶಕರಾದ ಎನ್. ವೆಂಕಟೇಶ್, ಬಿ‌.ಕೆ.ಪೂರ್ಣಯ್ಯ, ಎಂ.ಡಿ.ಗಿರೀಶ್, ಪ್ರೇಮ್ ಕುಮಾರ್, ಜಿ.ಎಸ್.ಚೇತನ್, ಆರ್.ಅಶೋಕ್, ಶರಣಪ್ಪ ಅಳಗುಂಡಗಿ, ಎಂ.ಸಿ.ಹರೀಶ್ ಕುಮಾರ್, ತಾಂಡವಮೂರ್ತಿ, ಪಿ.ಅಶೋಕ, ಸಿ.ಸಿ.ಮಂಜುನಾಥ್, ದೇವರಾಜ್, ಎಸ್.ರೂಪ, ಸಿ.ರಾಧ, ಮಾಜಿ ನಿರ್ದೇಶಕರಾದ ಭೇರ್ಯ ಶಿವಕುಮಾರ್, ಧರ್ಮೇಗೌಡ, ಭಾರಾಗಣಿ, ಗೋವಿಂದರಾಜು, ಸುರೇಶ್, ಚಾ.ನಗರದ ನಾ.ಮ.ನಾಗರಾಜ್, ಬೇಲೂರು ಘಟಕದ ಶೇಖರ್, ಮಡಿಕೇರಿ ಘಕದ ಮ್ಯಾಕ್ಸ್ ಬ್ರೋನಿ ಸೇರಿದಂತೆ ಅನೇಕ ಸದಸ್ಯರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular