ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಕಾಲೇಜಿನ ದ್ವಿತೀಯ ಪಿಯುಸಿ ಮೂರು ವಿದ್ಯಾರ್ಥಿನಿಯರ ಮೇಲೆ ಕೇರಳದ ಮಲಪುರಂ ಜಿಲ್ಲೆಯ ಅಬೀನ್ ಎಂಬ ವ್ಯಕ್ತಿ ಆಸಿಡ್ ದಾಳಿ ನಡೆಸಿದ್ದು, ಈ ಕೃತ್ಯವನ್ನು ದುರ್ಗಾವಾಹಿನಿ, ಮಾತೃಶಕ್ತಿ ಖಂಡಿಸಿದೆ. ದುರ್ಗಾವಾಹಿನಿ, ಮಾತೃಶಕ್ತಿಯ ಜಿಲ್ಲಾ ಪ್ರಮುಖರು ಮಂಗಳೂರಿನ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯರ ಹೆತ್ತವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು ಮತ್ತು ಧೈರ್ಯ ತುಂಬಿದರು.
ಈ ಅಮಾನವೀಯ ಕೃತ್ಯವನ್ನು ಆರೋಪಿ ಅಬೀನ್ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಶ್ವೇತಾ ಮತ್ತು ಮಾತೃಶಕ್ತಿ ಜಿಲ್ಲಾ ಸಂಯೋಜಕಿ ಸುಕನ್ಯಾ ರಾವ್ ಆಗ್ರಹಿಸಿದ್ದಾರೆ.