Saturday, December 13, 2025
Google search engine

Homeರಾಜ್ಯಸುದ್ದಿಜಾಲಪಕ್ಷಿಧಾಮದ ಕಾರ್ಮಿಕರಿಗೆ ಆಸರೆ ಆದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಪಕ್ಷಿಧಾಮದ ಕಾರ್ಮಿಕರಿಗೆ ಆಸರೆ ಆದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಮಂಡ್ಯ : ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚೆಗೆ ಪತ್ನಿ ಪ್ರೇರಣಾ ಜೊತೆ ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ಕೊಟ್ಟಿದ್ದರು. ಪಕ್ಷಿಧಾಮದಲ್ಲಿ ಕೆಲ ಹೊತ್ತು ವಿಹಾರ ಮಾಡಿದ ಬಳಿಕ ಧ್ರುವ ಸರ್ಜಾ ಕೊಡುಗೆ ಕೊಡಲು ನಿರ್ಧರಿಸಿದ್ದರಂತೆ. ಹೀಗಾಗಿ ಅಲ್ಲಿನ ಸಿಬ್ಬಂದಿಗೆ ಹಾಗೂ ಕೆಲಸ ಮಾಡುವ ಕಾರ್ಮಿಕರ ಕಷ್ಟಕ್ಕೆ ಮಿಡಿದಿದ್ದಾರೆ. ಕಾರ್ಮಿಕರಿಗೆ ಜರ್ಕಿನ್, ಬ್ಯಾಗ್, ವಾಟರ್ ಬಾಟಲ್ ಹಾಗೂ ವಿಷಜಂತುಗಳಿಂದ ರಕ್ಷಿಸಲ್ಪಡುವ ಶೂಗಳನ್ನ ನೀಡಿದ್ದಾರೆ.

ಅಂದಹಾಗೆ ನಟ ಧ್ರುವ ಸರ್ಜಾ ಸುಮ್ಮನೆ ಭೇಟಿ ಕೊಡೋದಲ್ಲದೆ ಅಲ್ಲಿನ ಕಾರ್ಮಿಕರ ಕಷ್ಟಕ್ಕೆ ಮಿಡಿದಿರುವುದು ವಿಶೇಷ. ಯಾಕಂದರೆ ಬಿಸಿಲು, ಮಳೆ, ಚಳಿ, ಗಾಳಿ ಲೆಕ್ಕಿಸಿದೆ ಪಕ್ಷಿಧಾಮದ ಪಾರ್ಕ್‌ನಲ್ಲಿ ದುಡಿಯುವ, ಪ್ರಾಣಿ ಪಕ್ಷಿಗಳನ್ನ ಜೋಪಾನ ಮಾಡುವ ಶ್ರಮಿಕರ ಕಷ್ಟಕ್ಕೆ ನಟ ಆಸರೆಯಾಗಿದ್ದಾರೆ. ಇನ್ನು ಧ್ರುವ ಸರ್ಜಾರ ಈ ಕೆಲಸಕ್ಕೆ ಪಕ್ಷಿಧಾಮದ ಕಾರ್ಮಿಕರು ಹರಸಿ ಹಾರೈಸಿದ್ದಾರೆ.

RELATED ARTICLES
- Advertisment -
Google search engine

Most Popular