ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮನೆಗೆ ಗೌರಿ-ಗಣೇಶ ಹಬ್ಬದ ದಿನವೇ ಹೊಸ ಅತಿಥಿಯ ಆಗಮನ ವಾಗಿದ್ದು, ಎರಡನೇ ಮಗುವಿಗೆ ಅಪ್ಪನಾದ ಸಂಭ್ರಮದಲ್ಲಿದ್ದಾರೆ. ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಹಬ್ಬದ ದಿನವೇ ಹೊಸ ಅತಿಥಿ ಆಗಮನ ಸರ್ಜಾ ಕುಟುಂಬದಲ್ಲಿ ಸಂತಸಕ್ಕೆ ಕಾರಣವಾಗಿದ್ದು, ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಪ್ರೇರಣಾ ಶಂಕರ್ ರವರಿಗೆ ಹೆರಿಗೆಯಾಗಿದ್ದು, ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ.