ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ವಸತಿ ರಹಿತರಿಗೆ ಆಧ್ಯತೆಯ ಮೇರೆಗೆ ಬಸವ ವಸತಿ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಡಿ.ರವಿಶಂಕರ್
ಹೇಳಿದರು. ತಾಲೂಕಿನ ದೊಡ್ಡೇಕೊಪ್ಪಲು ಗ್ರಾ.ಪಂ. ವ್ಯಾಪ್ತಿಯ ಬಸವಾಪಟ್ಟಣ ಗ್ರಾಮದಲ್ಲಿ ರಾಜ್ಯ ಸರ್ಕಾರದ
ಮಹಾತ್ವಕಾಂಕ್ಷಿ ಕಾರ್ಯಕ್ರಮವಾದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಸಂಬoದ ಈಗಾಗಲೆ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರದ ಜನಪರ ಕಾರ್ಯಕ್ರಮ ಮತ್ತು ಸವಲತ್ತುಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸಲು ಪ್ರ‍್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ತಾಕೀತು ಮಾಡಿದ ಅವರು ಈ ವಿಚಾರದಲ್ಲಿ ನಿರ್ಲಕ್ಷö್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಾರ್ವಜನಿಕರ ಸಭೆಗಳಲ್ಲಿ ಜನರು ನೀಡಿದ ದೂರುಗಳ ಬಗ್ಗೆ ಗಂಭೀರವಾಗಿ ಗಮನ ಹರಿಸಿ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಅವರು ಸರ್ಕಾರದ ಕೆಲಸಗಳನ್ನು ಅನುಷ್ಠಾನಗೊಳಿಸುವಾಗ ಸಾರ್ವಜನಿಕರು
ನಮ್ಮೊಂದಿಗೆ ಕೈ ಜೋಡಿಸಿ ಸಹಕಾರ ನೀಡಬೇಕು ಎಂದು ಕೇಳಿಕೊಂಡರು.
ಇಲ್ಲಿನ ಜನರ ಬಹುದಿನ ಬೇಡಿಕೆಯಂತೆ ಬಸವಾಪಟ್ಟಣ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿಸಿ ಇದರೊಂದಿಗೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಮಾಡಿಸಿ ಡರ‍್ನಹಳ್ಳಿಗೆ ನಿತ್ಯ ಅಲೆಯುವುದನ್ನು ತಪ್ಪಿಸುವುದಾಗಿ ಮಾತು ನೀಡಿದರಲ್ಲದೆ ರೈತರಿಗೆ ಅನುಕೂಲವಾಗುವಂತೆ ಕೃಷಿ ಕಣ ನಿರ್ಮಿಸಲು ಗಮನಹರಿಸುತ್ತೇನೆಂದು ವಾಗ್ದಾನ ನೀಡಿದರು.
ಇದರೊಂದಿಗೆ ಬಸವಾಪಟ್ಟಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಆರಂಭಿಸಿ ಗ್ರಾಮದ ವ್ಯಾಪ್ತಿಯಲ್ಲಿ ಹಾದುಹೋಗಿರುವ ನಾಲೆಗಳ ದುರಸ್ಥಿಗೆ ಅಗತ್ಯ ಅನುದಾನ ನೀಡಿ ಎಲ್ಲರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ ಎಂದು ಶಾಸಕರು ಹೇಳಿದರಲ್ಲದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಗದಿತವಾಗಿ ಹಳ್ಳಿಗಳಿಗೆ ಅವರ
ಸಮಸ್ಯೆ ಆಲಿಸಿ ನನಗೆ ವರದಿ ನೀಡಬೇಕು ಎಂದು ಆದೇಶಿಸಿದರು.
ಆನಂತರ ಶಾಸಕರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಹಂಗರಬಾಯನಹಳ್ಳಿ, ದೊಡ್ಡೇಕೊಪ್ಪಲು, ಅರಕೆರೆಕೊಪ್ಪಲು, ಅರಕೆರೆ, ಚೌಕಹಳ್ಳಿ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಕೆಲವು ತೊಂದರೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರಲ್ಲದೆ ಉಳಿದ ಮನವಿಗಳಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ದೊಡ್ಡೇಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿಬಲರಾಮು, ಉಪಾಧ್ಯಕ್ಷೆ ಕಾವ್ಯರಾಜು, ಸದಸ್ಯರಾದ ಬ.ಮ.ಗಿರೀಶ್, ಚೌಕಳ್ಳಿಶೇಖರ್, ಶ್ವೇತಾರವಿ, ಮಹದೇವಮ್ಮ, ಲಕ್ಷಿö್ಮರೇವಣ್ಣ, ಕುಮಾರ್, ಭಾಗ್ಯಕರೀಗೌಡ, ತಾ.ಪಂ.ಮಾಜಿ ಉಪಾಧ್ಯಕ್ಷೆ ನಾಗಮ್ಮ, ಮಾಜಿ ಸದಸ್ಯರಾದ ಮಹದೇವ್, ನಂಜುoಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಹೆಚ್.ಕೆ.ಪ್ರದೀಪ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಬ್ಲಾಕ್ ಕಾಂಗ್ರೇಸ್
ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್ ಜಾಬೀರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ಮುಖಂಡರಾದ ಅಪ್ಪಾಜಿಗೌಡ, ರಾಮಚಾರಿ, ರಾಮಯ್ಯ, ನಂಜುAಡ, ಜಯರಾಮೇಗೌಡ, ಕಾಳಯ್ಯ, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಇಒ ವಿ.ಪಿ.ಕುಲದೀಪ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಬಿಇಒಆರ್.ಕೃಷ್ಣಪ್ಪ, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಪಶು ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಂಜುನಾಥ್, ಆಹಾರ ಶಿರಸ್ತೇದ್ದಾರ್ ಮಂಜುನಾಥ್, ಕುಮಾರ್, ಅಬಕಾರಿ ನಿರೀಕ್ಷ ವೈ.ಎಸ್.ಲೋಕೇಶ್, ಹಾರಂಗಿ ಎಇಇ ಅಯಾಜ್ ಪಾಷ, ಅರಣ್ಯಾಧಿಕಾರಿ ಹರಿಪ್ರಸಾದ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.