ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್. ನಗರ: ಜಿಲ್ಲಾ ಸಹಕಾರ ಬ್ಯಾಂಕಿನ ನೂತನ ಆಡಳಿತ ಮಂಡಳಿ ರಚನೆಯಾದ ತಕ್ಷಣವೇ ಸಹಕಾರ ಬ್ಯಾಂಕಿನ ನೂತನ ಸದಸ್ಯರಿಗೆ ಸಾಲ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹನಸೋಗೆ ಕೃಷಿಪತ್ತಿನ ಸಹಕಾರ ಸಂಘದ 2024-25 ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಜಿಲ್ಲಾ ಬ್ಯಾಂಕಿಗೆ ಹೆಚ್ಚಿನ ಸಾಲವನ್ನು ಮಂಜೂರು ಮಾಡಿಸಲು ಮುಖ್ಯಮಂತ್ರಿಗಳನ್ನ ಜಿಲ್ಲಾ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರು ಬೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದರು.
ಸಂಘದ ಅಡಳಿತ ಮಂಡಳಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಿ.ರವಿಶಂಕರ್ ಅವರ ನಿಧಿಯಿಂದ 5 ಲಕ್ಷ ಮತ್ತು ಜಿಲ್ಲಾ ಬ್ಯಾಂಕಿನಿಂದ 10 ಲಕ್ಷ ಕೊಡಿಸುವುದಾಗಿ ಭರವಸೆ ನೀಡಿದರು
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಸಿ.ಮಹದೇವಪ್ಪ ಮಾತಾನಾಡಿ ಸಂಘವು 2024-25 ನೇ ಸಾಲಿನಲ್ಲಿ ವಿವಿಧ ಸಾಲವಾಗಿ 12.68 ಕೋಟಿ ಸಾಲವನ್ನು ವಿತರಿಸಿ ಪ್ರಸಕ್ತ ಸಾಲಿನಲ್ಲಿ 7.34 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಂಘದ ಕಾರ್ಯದರ್ಶಿ ಎಚ್.ಪಿ.ನಂಜುಂಡ ಸ್ವಾಮಿ ಮಾತನಾಡಿ ಪ್ರಸ್ತುತ ಸಾಲಿನಲ್ಲಿ 3.83 ಕೋಟಿ ಕೆ.ಸಿ.ಸಿ.ಸಾಲ, ಮಧ್ಯಮಾವಧಿ ಸಾಲ 4.50ಲಕ್ಷ, ಸೌದೆ ಸಾಲವಾಗಿ 5.40 ಲಕ್ಷ ರೂ ಸಾಲ ವಿತರಿಸಿದ್ದು ಕೆ.ಸಿ.ಸಿ.ಸಾಲವನ್ನು 12 ಕೋಟಿ ರೂ ಗೆ ಹೆಚ್ಚಿಸಲು ಗುರಿ ಹೊಂದಲಾಗಿದೆ ಎಂದು ತಿಳಿಸಿ ಸಂಘದ ವಾರ್ಷಿಕ ಬಜೆಟ್ ಮಂಡಿಸಿದರು.
ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಕರೀಗೌಡ, ಷೇರುದಾರ ರಾದ ಕರುಣೇಶ್ ಕುಮಾರ್, ಚಂದ್ರನಾಯಕ್, ಪಾಂಡುರಂಗ, ಸುರೇಶ್, ಮೆಡಿಕಲ್ ರಾಮಕೃಷ್ಣ, ಸತೀಶ್ ಕುಮಾರ್, ಕರ್ತಾಳ್ ಪರಮೇಶ್, ಜಗದೀಶ್ ಮೊದಲಾದವರು ಬಳಕೆ ಸಾಲ ನೀಡಿ, ಹೊಸ ಸದಸ್ಯರಿಗೆ ಸಾಲ, ವಾಹನಗಳ ಸಾಲದ ಜತಗೆ ಗೊಬ್ಬರ ಮಾರಾಟ ಅರಂಭಿಸುವುದರ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿಸಿ ಮಾತನಾಡಿದಾಗ ಸಂಘದ ಜಿಲ್ಲಾ ಮೇಲ್ವಿಚಾರಕ ಮೂಡಲಕೊಪ್ಪಲು ದಿನೇಶ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ, ಸಂಘದ ಮಾಜಿ ಅಧ್ಯಕ್ಷ ಕರೀಗೌಡ ಅವರನ್ನು ಸನ್ಮಾನಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಮೀನಾಕ್ಷಿ, ಅಮ್ ಜಾದ್ ಪಾಷ, ಕೆ.ಎಸ್.ಪಾಂಡುರಂಗ, ಕರೀಗೌಡ,ಎಚ್.ಕೆ.ತಿಮ್ಮೇಗೌಡ, ಎಚ್.ಎನ್.ನವೀನ್, ಹೆಚ್.ಪಿ.ಮೋಹನ್, ನೀಲಮ್ಮ, ಎಚ್.ಟಿ.ರಾಜೇಗೌಡ, ಎಚ್.ಕೆ.ರಾಜಯ್ಯ,ಎಚ್.ಟಿ.ನಾಗರಾಜ್ ಸಂಘದ ಸಿಬ್ಬಂದಿಗಳಾದ ರಾಧ, ಕಿರಣ್ಸೇರಿದಂತೆ ಮತ್ತಿತರರು ಹಾಜರಿದ್ದರು