ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕ್ಷೇತ್ರದ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯ್ತಿ ಕೇಂದ್ರದಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಗಂಧನಹಳ್ಲಿ ಗ್ರಾಮದಲ್ಲಿ ಚಿಕ್ಕವಡ್ಡರಗುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಾಣ ಮಾಡುತ್ತಿರುವ ಗೋದಾಮು ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ದೇಶ ಆರ್ಥಿಕವಾಗಿ ಸಬಲವಾಗಬೇಕಾದರೆ ರೈತರು ಶಕ್ತರಾಗಬೇಕು ಹಾಗಾಗಿ ನಮ್ಮ ಸರ್ಕಾರ ಅವರಿಗೆ ಎಲ್ಲಾ ರೀತಿಯ ನೆರವು ನೀಡಲು ಮೊದಲ ಆಧ್ಯತೆ ನೀಡುತ್ತಿದೆ ಎಂದು ತಿಳಿಸಿದರು.
ಅಧಿಕಾರಿಗಳು ರೈತರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಿ ಜತೆಗೆ ಕೃಷಿ ಸಂಬಂದಿತ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕೆಂದು ಸೂಚನೆ ನೀಡಿದರು.
ಗಂಧನಹಳ್ಳಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನ ಕೊಡಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ ಶಾಸಕರು ಜನತೆ ನನಗೆ ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಜನಪರ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕ್ಷೇತ್ರದ ವಿವಿದ ಭಾಗಗಳ ಅಭಿವೃದ್ದಿಗೆ ರಾಜ್ಯ ಸರ್ಕಾರ ಈವರೆಗೆ 200 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದ್ದು ಇದರೊಂದಿಗೆ ಮತ್ತಷ್ಠು ಹಣ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಗಂಧನಹಳ್ಳಿ ಗ್ರಾಮದ ಸಂಪೂರ್ಣ ಅಭಿವೃದ್ದಿಗೆ ಕಂಕಣ ಬದ್ದನಾಗಿ ಕೆಲಸ ಮಾಡುವ ವಾಗ್ದಾನ ನೀಡಿದರಲ್ಲದೆ ಸಾರ್ವಜನಿಕ ಕಾಮಗಾರಿ ನಡೆಯುವಾಗ ಗ್ರಾಮದ ಜನರು ಪರಿಶೀಲಿಸಿ ಎಂದು ಸಲಹೆ ನೀಡಿದರು.
ತಾಲೂಕಿನ ಗಂಧನಹಳ್ಳಿ ಗ್ರಾಮದಿಂದ ಕಪ್ಪಡಿ ಮೂಲಕ ಹೆಬ್ಬಾಳು ಗ್ರಾಮದಿಂದ ಕೆ.ಆರ್.ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲು 20 ಕೋಟಿ ರೂಗಳ ಪ್ರಸ್ತಾವನೆ ಸಲ್ಲಿಸಿದ್ದು ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯಲಿದ್ದು ಈ ಸೇತುವೆ ನಿರ್ಮಾಣದಿಂದ ಕೆ.ಆರ್.ನಗರಕ್ಕೆ 6 ಕಿ.ಮೀ ದೂರ ಕಡಿಮೆಯಾಗಲಿದೆ ಎಂದರು.
ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಅಗತ್ಯ ಹಣ ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪ-ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎನ್.ಎಸ್.ಬೋಸರಾಜು, ಸತೀಶ್ ಜಾರಕಿಹೊಳಿ, ಕೆ.ವೆಂಕಟೇಶ್, ಹೆಚ್ಸಿ.ಮಹದೇವಪ್ಪ. ಸೇರಿದಂತೆ ಇತರರನ್ನು ಕರೆಯಿಸಿ ಕೆ.ಆರ್.ನಗರದ ಪುರಸಭೆ ಬಯಲು ರಂಗ ಮಂದಿರದಲ್ಲಿ ಬೃಹತ್ ಕಾರ್ಯಕ್ರಮ ನಡೆಸುವುದಾಗಿ ಪ್ರಕಟಿಸಿದರು.
ಇದೇ ಸಂದರ್ಭದಲ್ಲಿ 25 ರೂ ಲಕ್ಷಗಳಲ್ಲಿ ಗಂಧನಹಳ್ಳಿ ಗ್ರಾಮದ ಶಿವಯ್ಯ ರವರ ಮನೆಯಿಂದ ಅಂಗಡಿ ರೇವಯ್ಯ ರವರ ಮನೆಯವರೆಗೆ ರಸ್ತೆ ಅಭಿವೃದ್ಧಿ 35 ರೂ ಲಕ್ಷಗಳಲ್ಲಿ ಗ್ರಾಮದ ಬಲರಾಮರವರ ಮನೆಯಿಂದ ಮಂಜುನಾಯಕ ಮನೆಯವರೆಗೆ ರಸ್ತೆ ಅಭಿವೃದ್ಧಿ 5 ಲಕ್ಷ ರೂ ವೆಚ್ಚದಲ್ಲಿ ಗಂಧನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಕಾಮಗಾರಿ19.56 ಲಕ್ಷ ರೂಗಳ ವೆಚ್ಚದಲ್ಲಿ ಗಂಧನಹಳ್ಳಿ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣ ಕಾಮಗಾರಿಈ ಎಲ್ಲಾ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೆರಿಸಿ ಕಾಮಗಾರಿ ಚಾಲನೆ ನೀಡಿದರು.
ಇದೆ ಸಂಧರ್ಭದಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿ ವರ್ಗದವರು ಗ್ರಾಮದ ಹಿರಿಯ ಪ್ರಮುಖ ಮುಖಂಡರು, ಯುವಕ ಮಿತ್ರರು, ಗ್ರಾಮಸ್ಥರು ಉಪಸ್ಥಿತರಿದ್ದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಜಿ.ಪಂ.ಎಇಇ ವಿನುತ್, ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಎಸ್.ರವಿ, ಜಿ.ಪಂ.ಮಾಜಿ ಸದಸ್ಯ ರಾಮೇಗೌಡ ಕಾಂಗ್ರೆಸ್ ಮುಖಂಡ ಗಂಧನಹಳ್ಳಿ ವೆಂಕಟೇಶ್, ಗ್ರಾ.ಪಂ.ಅಧ್ಯಕ್ಷೆ ಮಹದೇವಿ ಬಲರಾಂ., ಉಪಾಧ್ಯಕ್ಷ ಆನಂದ್, ಚಿಕ್ಕವಡ್ಡರಗುಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಂಗೇಗೌಡ, ಉಪಾಧ್ಯಕ್ಷ ಮಹದೇವನಾಯಕ, ದೊಡ್ಡಯಜಮಾನ ರಘು, ಸಹಕಾರ ಸಂಘದ ನಿರ್ದೇಶಕರಾದ ಕೃಷ್ಣೇಗೌಡ, ನಾಗಮ್ಮ, ಕಾಮಾಕ್ಷಮ್ಮ, ನಾರಾಯಣ,ಕೆಂಪೇಗೌಡ, ಜಿ.ಜೆ.ಮಹದೇವ, ನಿಂಗಾಜೋಗಿ, ಸಿ.ರಮೇಶ್ ಬಾಬು, ವೀರಭದ್ರಸ್ವಾಮಿ, ಪದ್ಮಮ್ಮ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ದಿನೇಶ್, ಬಸವರಾಜು, ತಾ.ಪಂ.ಮಾಜಿ ಸದಸ್ಯ ಜಿ.ಎಸ್.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಎಂ.ಎಸ್.ಮಹದೇವ್, ಉದಯ್ ಶಂಕರ್, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಮುಖಂಡರಾದ ಪ್ರೇಮಾಶಿವಣ್ಣ, ಗಂಧನಹಳ್ಳಿ ಹೇಮಂತ್, ಜಿ.ಡಿ.ಕುಮಾರ್, ಕೆಂಪರಾಜು, ಪೋಸ್ಟ್ ಮರೀಗೌಡ, ಜಿ.ಆರ್.ಸತೀಶ್, ರಾಮು, ಬಂಗಾರಿಮಹದೇವ್ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು.