ಮಹಾರಾಷ್ಟ್ರ ಸರ್ಕಾರದ ನೇತೃತ್ವದಲ್ಲಿ ಮುಂಬೈ ನಗರದ ಪ್ರತಿಷ್ಠಿತ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ಆಯೋಜಿಸಲಾಗಿದ್ದ , ಎರಡು ದಿನಗಳ ಮುಂಬೈ ಕ್ಲೈಮೇಟ್ ವೀಕ್ ಕಾರ್ಯಗಾರದಲ್ಲಿ ದೇಶಾದ್ಯಂತ ಹಲವು ರಾಜ್ಯಗಳ ಪ್ರತಿನಿಧಿಗಳೊಂದಿಗೆ ಗ್ರಾಮ ವಿಕಾಸ ಹಾಗೂ ಅಸರ್ ವತಿಯಿಂದ. ರೂಪಿಸಲಾಗುತ್ತಿರುವ ಹವಾಮಾನ ಕ್ರಿಯಾ ಆಂದೋಲನ -ಕರ್ನಾಟಕ ಪ್ರತಿನಿಧಿಗಳಾಗಿ ಶ್ರೀ ಸುದೀಪ್, ಶ್ರೀ ರಾಜಾಹುಣಸೂರು, ಎಡತೊರೆ ಮಹೇಶ್, ಮಮತಾ ತಳವಾರ್ ಹಾಗೂ ಸೂರ್ಯನಾರಾಯಣರಾವ್ ಪಾಲ್ಗೊಂಡಿದ್ದರು.

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಡೆಗಟ್ಟುವಲ್ಲಿ ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ಸಂಸ್ಥೆಯ ಹಲವು ಅಧಿವೇಶನಗಳಲ್ಲಿ ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದರು
ಕರ್ನಾಟಕದಲ್ಲಿ ಅವಮಾನ ಕ್ರಿಯಾ ಆಂದೋಲನದ ಮೂಲಕ ಕೈಗೊಂಡಿರುವ ಕಾರ್ಯತಂತ್ರಗಳನ್ನು ಹಂಚಿಕೊಳ್ಳಲಾಯಿತು.
ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಹಳ್ಳಿಯನ್ನು ಉಳಿಸೋಣ ಅಭಿಯಾನದ ಹೆಸರಿನಲ್ಲಿ ಹವಾಮಾನ ಕ್ರಿಯಾ ಸಮಿತಿಗಳನ್ನು ರಚಿಸಿ ಗ್ರಾಮ ಸಭೆಗಳನ್ನು ಬಲಿಷ್ಠ ಗೊಳಿಸುವ ಮತ್ತು ಸರ್ಕಾರಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸಿ ನೀಡುವ ಪೂರಕ ವಾತಾವರಣವನ್ನು ಸೃಷ್ಟಿಸಲು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಆಸಠ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ವಿನುತಾ ಹಾಗೂ ಕರ್ನಾಟಕದ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಸುದೀಪ್ ರವರು ಮುಂಬೈ ಕ್ಲೈಮೆಟ್ ವೀಕ್ ಕುರಿತ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ನಂತರ ನಡೆದ.ಅಸರ್ ಸಂಸ್ಥೆಯ ಪ್ರತಿನಿಧಿ ಅಧಿವೇಶನದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಡೆಗಟ್ಟಲು ಬಲಿಷ್ಠವಾದ ಆಂದೋಲನವನ್ನು ಕಟ್ಟುವ ನಿರ್ಣಯವನ್ನು ಕೈಗೊಳ್ಳಲಾಯಿತು.
ವಿಶೇಷವಾಗಿ ಕರ್ನಾಟಕದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಹಳ್ಳಿಯನ್ನು ಉಳಿಸೋಣ ಎಂಬ ಅಭಿಯಾನದೊಂದಿಗೆ ಹವಾಮಾನ ಕ್ರಿಯಾ ಸಮಿತಿಗಳನ್ನು ರಚಿಸಿ ಗ್ರಾಮ ಸಭೆಗಳನ್ನು ಗಟ್ಟಿಗೊಳಿಸಲು ನಿರ್ಣಯವನ್ನು ಕೈಗೊಳ್ಳಲಾಯಿತು.
ಹಳ್ಳಿಗಳ ಉಳಿವಿಗೆ ಅನುಕೂಲವಾಗುವಂತೆ ಮಣ್ಣು ನೀರು ಅರಣ್ಯ. ಜೀವಸಂಪತ್ತು ಹಾಗೂ ಜೀವನೋಪಾಯ ಚಟುವಟಿಕೆಗಳ ಸಂರಕ್ಷಣೆಗೆ ಪೂರಕವಾದ ಕ್ರಿಯಾಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.



