ಮಂಡ್ಯ: ಮದುವೆ ಆರತಕ್ಷತೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಆಗಮಿಸಿದ್ದು, ಈ ವೇಳೆ ಕಾರ್ಯಕಾರ್ತರು ಮುಂದಿನ ಎಂ.ಪಿ ಹೆಚ್ ಡಿ.ಕುಮಾರಸ್ವಾಮಿ ಎಂದು ಘೋಷಣೆ ಕೂಗಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ನಡೆದ ತಮ್ಮಪಕ್ಷದ ಮುಖಂಡರೊಬ್ಬರ ಮಗಳ ಮದುವೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗಮಿಸಿದ್ದರು.
ಈ ವೇಳೆ ಹಾರ ಹಾಕಿ ಜೈಕಾರ ಕೂಗಿ ಕಾರ್ಯಕರ್ತರು ಬರಮಾಡಿಕೊಂಡರು,
ಮುಂದಿನ ಎಂ ಪಿ ಕುಮಾರಸ್ವಾಮಿ ಎಂದೂ ಕಾರ್ಯಕರ್ತರು ಘೋಷಣೆ ಕೂಗಿದ್ದು, ಯಾವುದೇ ಪ್ರತಿಕ್ರಿಯೆ ನೀಡದೆ ಮದುವೆ ಆರತಕ್ಷತೆ ಮುಗಿಸಿ ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಹೊರಟು ಹೋಗಿದ್ದಾರೆ.