Saturday, April 19, 2025
Google search engine

Homeಸ್ಥಳೀಯಮೈಸೂರಲ್ಲಿ ಪತ್ನಿ, ಮಗನೊಂದಿಗೆ ಸಂಕ್ರಾಂತಿ ಆಚರಿಸಿದ ನಟ ದರ್ಶನ್

ಮೈಸೂರಲ್ಲಿ ಪತ್ನಿ, ಮಗನೊಂದಿಗೆ ಸಂಕ್ರಾಂತಿ ಆಚರಿಸಿದ ನಟ ದರ್ಶನ್

ಮೈಸೂರು : ನಟ ದರ್ಶನ್ ತೂಗುದೀಪ ಅವರ ಮನೆಯಲ್ಲಿ ಮಕರ ಸಂಕ್ರಾಂತಿಯ ಹಬ್ಬದ ಸಡಗರ ಜೋರಾಗಿದೆ. 2025ನೇ ವರ್ಷದ ಮೊದಲ ಹಬ್ಬವನ್ನು ದರ್ಶನ್ ಅವರೊಂದಿಗೆ ಆಚರಿಸಬೇಕು ಅನ್ನೋ ವಿಜಯಲಕ್ಷ್ಮಿ ಅವರ ಆಸೆ ಕೊನೆಗೂ ಈಡೇರಿದೆ. ಹೀಗಾಗಿ ದರ್ಶನ್ ಅವರೊಂದಿಗೆ ಇರುವ ಫೋಟೋವನ್ನು ವಿಜಯಲಕ್ಷ್ಮೀ ಇಂದು ಶೇರ್ ಮಾಡಿದ್ದಾರೆ.

ಜಾಮೀನು ಪಡೆದ ನಂತರ ದರ್ಶನ್‌ ಕೊಂಚ ನಿರಾಳರಾದಂತೆ ಕಂಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಮೈಸೂರಿಗೆ ಹೋಗಲು ಕೋರ್ಟ್‌ನಿಂದ ಅನುಮತಿ ಪಡೆದುಕೊಂಡು ಇದೀಗ ಮೈಸೂರಿನ ಫಾರಂ ಹೌಸ್‌ ನಲ್ಲಿ ಪ್ರಾಣಿಗಳ ಹಾರೈಕೆ ಮಾಡುವ ಮೂಲಕ ಸಂಕ್ರಾಂತಿಹಬ್ಬವನ್ನು ಆಚರಣೆ ಮಾಡಿದ್ದಾರೆ.ದರ್ಶನ್‌ ಮೊದಲೇ ಪ್ರಾಣಿ ಪ್ರಿಯರು ಅವರು ಫಾರಂ ಹೌಸ್‌ ನಲ್ಲಿ ವಿವಿಧ ತಳಿಯ ಜಾನುವಾರುಗಳು ಇವೆ. ಪ್ರತಿ ವರ್ಷವೂ ಸಹ ಸಂಕ್ರಾಂತಿ ಬಂದಾಗ ಇಲ್ಲಿನ ಎಲ್ಲಾ ಪ್ರಾಣಿಗಳಿಗೂ ಸಹ ವಿಶೇಷವಾದ ಸಂಭ್ರಮ ಮನೆಮಾಡುತ್ತಿತ್ತು. ಇಲ್ಲಿನ ಪ್ರಾಣಿಗಳಿಗೆ ಸ್ನಾನ ಮಾಡಿಸಿ ನಂತರ ಅವುಗಳಿಗೆ ಅಲಂಕಾರ ಮಾಡಿ ಕಿಚ್ಚು ಹಾಯಿಸುತ್ತಾರೆ.

ದರ್ಶನ್ ಪೂರ್ಣಾವಧಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಪತ್ನಿ ವಿಜಯಲಕ್ಷ್ಮೀ ತುಂಬಾ ಖುಷಿಯಾಗಿದ್ದಾರೆ. ಪ್ರಸ್ತುತ ಮೈಸೂರಿನ ತಮ್ಮ ಫಾರ್ಮ್‌ ಹೌಸ್‌ನಲ್ಲಿರುವ ದರ್ಶನ್ ಅವರು ಪತ್ನಿ, ಮಗ ಹಾಗೂ ತಮ್ಮ ಸಾಕು ಪ್ರಾಣಿಗಳೊಂದಿಗೆ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಫೋಟೋವನ್ನು ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ದರ್ಶನ್‌ ಜೊತೆಗೆ ಸಾಕುಪ್ರಾಣಿಗಳನ್ನು ನೋಡುತ್ತಿರುವ ಹಿಂಬದಿಯ ಫೋಟೋವನ್ನು ವಿಜಯಲಕ್ಷ್ಮೀ ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮೀ ಕೈಯಲ್ಲಿ ಒಂದು ಪಟ್ಟ ನಾಯಿ ಮರಿ ಇದ್ದು ಇಬ್ಬರೂ ಕೂಡ ಸಂತೋಷದಿಂದಿರುವುದು ಕಾಣಬಹುದು.

ದರ್ಶನ್‌ಗೆ ಮತ್ತೊಂದು ಸಂಕಷ್ಟ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ದರ್ಶನ್ ಅವರ ಬಂದೂಕು ಪರವಾನಗಿ ರದ್ದುಪಡಿಸಲು ಬೆಂಗಳೂರು ನಗರ ಪೊಲೀಸರು ಚಿಂತನೆ ನಡೆಸಿದ್ದು, ಹದಿನೈದು ದಿನಗಳ ಹಿಂದೆ ನೋಟಿಸ್ ನೀಡಿದ್ದರೂ ಅವರು ಪರವಾನಗಿ ಹೊಂದಿರುವ ಬಂದೂಕನ್ನು ಇನ್ನೂ ಒಪ್ಪಿಸಿಲ್ಲ ಎಂದು ವಿಷಯ ತಿಳಿದ ಅಧಿಕಾರಿ ತಿಳಿಸಿದ್ದಾರೆ. ಅದನ್ನು ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಿ ಎಂದು ತಿಳಿಸಲಾಗಿದೆ.

ದರ್ಶನ್ ಅವರ ಗನ್‌ ಅನ್ನು ಖಾತ್ರಿಪಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಶ್ಚಿಮ ವಿಭಾಗದ ಪೊಲೀಸರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಉಪ ಪೊಲೀಸ್ ಆಯುಕ್ತರಿಗೆ (ಆಡಳಿತ) ಮನವಿ ಕಳುಹಿಸಿದ್ದರು. ಕೊಲೆ ಪ್ರಕರಣದಲ್ಲಿ ಡಿಸೆಂಬರ್ 13 ರಂದು ಕರ್ನಾಟಕ ಹೈಕೋರ್ಟ್ ದರ್ಶನ್‌ಗೆ ಜಾಮೀನು ಮಂಜೂರು ಮಾಡಿದ ನಂತರ ಮನವಿ ಸಲ್ಲಿಸಲಾಯಿತು. ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

RELATED ARTICLES
- Advertisment -
Google search engine

Most Popular