Friday, April 4, 2025
Google search engine

Homeಅಪರಾಧಬಳ್ಳಾರಿ ಜೈಲಿನಿಂದ ನಟ ದರ್ಶನ್ ಬಿಡಗಡೆ

ಬಳ್ಳಾರಿ ಜೈಲಿನಿಂದ ನಟ ದರ್ಶನ್ ಬಿಡಗಡೆ

ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಜಾಮೀನು ಪಡೆದಿರುವ ನಟ ದರ್ಶನ್ ಇದೀಗ ಬಳ್ಳಾರಿ ಜೈಲಿನಿಂದ ಬಿಡಗಡೆಯಾಗಿದ್ದಾರೆ.

ನಟ ದರ್ಶನ್ ಜಾಮೀನು ಅರ್ಜಿ ಆದೇಶವನ್ನ ಇಂದಿಗೆ ಕಾಯ್ದಿರಿಸಿದ್ದ ಹೈಕೋರ್ಟ್ ಇಂದು ಚಿಕಿತ್ಸೆಗಾಗಿ 6 ವಾರಗಳ ಕಾಲ ನಟ ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇದೀಗ ಜಾಮೀನು ಆದೇಶದ ಪ್ರತಿಯನ್ನ ಬಳ್ಳಾರಿ ಜೈಲು ಅಧೀಕ್ಷಕರಿಗೆ ತಲುಪಿಸಲಾಗಿದ್ದು, ಈ ಬೆನ್ನಲ್ಲೆ ನಟ ದರ್ಶನ್ ಅವರನ್ನ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಬಳ್ಳಾರಿಯ ಹೈ ಸೆಕ್ಯೂರಿಟಿ ಸೆಲ್ ನಿಂದ ಹೊರ ಬಂದು, ಅಲ್ಲಿಂದ ಜೈಲಿನ ಬಿಡುಗಡೆಯ ಎಲ್ಲಾ ನಿಯಮಗಳನ್ನು ಪಾಲಿಸಿ, ಸಹಿ ಹಾಕಿದ ನಂತ್ರ, ಬಳ್ಳಾರಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದೀಗ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾರೆ.

RELATED ARTICLES
- Advertisment -
Google search engine

Most Popular