Thursday, April 10, 2025
Google search engine

Homeಸಿನಿಮಾನಟ ದರ್ಶನ್‌ ಅಭಿನಯದ ಕರಿಯ ಚಿತ್ರ ಆಗಸ್ಟ್‌ 30ರಂದು ಮತ್ತೆ ತೆರೆಗೆ

ನಟ ದರ್ಶನ್‌ ಅಭಿನಯದ ಕರಿಯ ಚಿತ್ರ ಆಗಸ್ಟ್‌ 30ರಂದು ಮತ್ತೆ ತೆರೆಗೆ

ಬೆಂಗಳೂರು: ನಟ ದರ್ಶನ್‌ ಅಭಿನಯದ ಕರಿಯ ಚಿತ್ರ ಆಗಸ್ಟ್‌ 30ರಂದು ರಾಜ್ಯದ ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆಯಾಗಲಿದೆ.

ಈ ಕುರಿತು ನಿರ್ದೇಶಕ ಪ್ರೇಮ್‌ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

‘ಭಾರತೀಯ ಚಿತ್ರರಂಗದಲ್ಲಿ ಇದೊಂದು ಮೈಲಿಗಲ್ಲು, ಕರಿಯ ಇದು ನಿಮ್ಮಿಂದ. ಅಭಿಮಾನಿಗಳು ಶಾಂತಿ, ತಾಳ್ಮೆ ಹಾಗೂ ಪ್ರೀತಿಯಿಂದ ಕರಿಯನನ್ನು ಹರಸಿ ಹಾರೈಸಿ. ಯಾವುದೇ ಅತಿರೇಕಗಳನ್ನು ಮಾಡಬೇಡಿ. ನಿಮ್ಮ ಆನ್‌ಲೈನ್‌ ಬರವಣಿಗೆಗಳು ಬೇರೆಯವರಿಗೆ ನೋವು ತರದಿರಲಿ. ದರ್ಶನ್‌ ಅವರು ಕಾನೂನು ಮುಕ್ತರಾಗಿ ಆದಷ್ಟು ಬೇಗ ಹೊರಗೆ ಬಂದು ನಿಮ್ಮ, ನಮ್ಮ ಜೊತೆ ಬೆರೆಯಲಿ, ಬೆಳಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ನಿರ್ದೇಶಕ ಪ್ರೇಮ್‌ ಬರೆದುಕೊಂಡಿದ್ದಾರೆ.

ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆಗಸ್ಟ್‌ 28ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

RELATED ARTICLES
- Advertisment -
Google search engine

Most Popular