Friday, April 11, 2025
Google search engine

Homeಸಿನಿಮಾಸಿಎಂ ಭೇಟಿಯಾದ ನಟ ದುನಿಯಾ ವಿಜಿ: ‘ಭೀಮ’ ಸಿನಿಮಾ ವೀಕ್ಷಿಸಲು ಆಹ್ವಾನ

ಸಿಎಂ ಭೇಟಿಯಾದ ನಟ ದುನಿಯಾ ವಿಜಿ: ‘ಭೀಮ’ ಸಿನಿಮಾ ವೀಕ್ಷಿಸಲು ಆಹ್ವಾನ

‘ಭೀಮ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ನಟ, ನಿರ್ದೇಶಕ ದುನಿಯಾ ವಿಜಯ್, ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾಗಿದ್ದಾರೆ. ಆಗಸ್ಟ್ 9 ರಂದು ತಮ್ಮ ‘ಭೀಮ’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾ ನೋಡಲು ಸಿದ್ದರಾಮಯ್ಯ ಅವರನ್ನು ದುನಿಯಾ ವಿಜಯ್ ಆಹ್ವಾನಿಸಿದ್ದಾರೆ. ಸಿದ್ದರಾಮಯ್ಯ ಅವರು ಸಹ ದುನಿಯಾ ವಿಜಯ್​ರ ಆಹ್ವಾನವನ್ನು ಮನ್ನಿಸಿ, ಸಿನಿಮಾ ನೋಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ನಡೆದಿದ್ದ ‘ಭೀಮ’ ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿಯೂ ಸಿದ್ದರಾಮಯ್ಯ ಭಾಗಿ ಆಗಿದ್ದರು. ಅದಕ್ಕೂ ಮುಂಚೆ ‘ಸಲಗ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ತಮ್ಮನ್ನು ಸಿದ್ದರಾಮಯ್ಯ ಅಭಿಮಾನಿ ಎಂದು ದುನಿಯಾ ವಿಜಯ್ ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರೊಟ್ಟಿಗೆ ಉತ್ತಮ ನಂಟನ್ನು ದುನಿಯಾ ವಿಜಯ್ ಹೊಂದಿದ್ದಾರೆ.

ಇದೇ ವರ್ಷ ನಡೆದ ಚುನಾವಣೆ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ದುನಿಯಾ ವಿಜಯ್ ಪ್ರಚಾರ ಮಾಡಿದ್ದರು. ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕು ಎಂದು ಅಪೇಕ್ಷಿಸಿದ್ದರು. ತಮ್ಮ ಪರವಾಗಿ ಪ್ರಚಾರ ಮಾಡಿದ್ದ ದುನಿಯಾ ವಿಜಯ್​ಗೆ ಸಿದ್ದರಾಮಯ್ಯ ಧನ್ಯವಾದ ಸಹ ಅರ್ಪಣೆ ಮಾಡಿದ್ದರು. ಅಂತೆಯೇ ಈಗ ಸಿದ್ದರಾಮಯ್ಯ ಮತ್ತೆ ಸಿಎಂ ಆಗಿದ್ದಾರೆ.

‘ಭೀಮ’ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ಎರಡನೇ ಸಿನಿಮಾ. ಈ ಹಿಂದೆ ‘ಸಲಗ’ ಸಿನಿಮಾವನ್ನು ದುನಿಯಾ ವಿಜಯ್ ನಿರ್ದೇಶನ ಮಾಡಿದ್ದರು. ‘ಭೀಮ’ ಸಿನಿಮಾ ಆಗಸ್ಟ್ 09 ರಂದು ಬಿಡುಗಡೆ ಆಗಲಿದೆ. ಸಿನಿಮಾ ಬೆಂಗಳೂರಿನ ಅಂಡರ್ವಲ್ಡ್ ಕತೆಯನ್ನು ಒಳಗೊಂಡಿದೆ. ಸಿನಿಮಾದ ಕೆಲವು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಹಾಡುಗಳು ಟ್ರೆಂಡ್ ಸೃಷ್ಟಿಸಿದೆ.

RELATED ARTICLES
- Advertisment -
Google search engine

Most Popular