ಮಲಯಾಳಂ ಚಿತ್ರೋದ್ಯಮದ ಹೆಸರಾಂತ ನಟ ಮೋಹನ್ ಲಾಲ್ ಇಂದು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಆಗಮಿಸಿದ್ದರು. ತಮ್ಮ ಟೀಮ್ ಜೊತೆ ಬಂದಿದ್ದ ಮೋಹನ್ ಲಾಲ್ ಪೂಜೆ ಸಲ್ಲಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಕೆಲ ಹೊತ್ತು ದೇವಸ್ಥಾನದ ಆವರಣದಲ್ಲೇ ನಟ ಇದ್ದರು. ನಂತರ ಅಭಿಮಾನಿಗಳ ಜೊತೆ ಸಮಯ ಕಳೆದರು.
ಈ ನಡುವೆ ಮೋಹನ್ ಲಾಲ್ ಸದ್ಯ ವೃಷಭ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೊಂದು ಬೃಹತ್ ಸಾಹಸಮಯ ಚಿತ್ರವಾಗಿದ್ದು, ಮೈ ಜುಂ ಎನಿಸುವಂತಹ ಸಾಹಸ ಮತ್ತು ರೋಚಕ ದೃಶ್ಯಗಳು ಇವೆ. ಮೋಹನ್ ಲಾಲ್ ಜೊತೆಗೆ ರೋಶನ್ ಮೇಕಾ, ಶನಾಯ ಕಪೂರ್, ಝಾರಾ ಖಾನ್, ಶ್ರೀಕಾಂತ್ ಮೇಕಾ ಮುಂತಾದವರು ನಟಿಸುತ್ತಿದ್ದಾರೆ. ಕನ್ನಡದ ರಾಗಿಣಿ ದ್ವಿವೇದಿ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.