Thursday, April 3, 2025
Google search engine

Homeಸಿನಿಮಾನಟ ಶಿವರಾಜ್ ಕುಮಾರ್ ದಂಪತಿ ದೇವಾಲಯಕ್ಕೆ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ನಟ ಶಿವರಾಜ್ ಕುಮಾರ್ ದಂಪತಿ ದೇವಾಲಯಕ್ಕೆ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಚಾಮರಾಜನಗರ: ಅನಾರೋಗ್ಯದ ಹಿನ್ನಲೆಯಲ್ಲಿ ನಟ ಶಿವರಾಜ್ ಕುಮಾರ್ ದಂಪತಿ ವಿವಿಧ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಚಾಮರಾಜನಗರದ ಆದಿಶಕ್ತಿ ದೇವಾಲಯಕ್ಕೆ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಭೇಟಿ ನೀಡಿ ಅರ್ಚನೆ ಮಾಡಿಸಿದರು.

ಹಾಗೆಯೇ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿದರು. ಡಿಸೆಂಬರ್ 18ರಂದು ನಟ ಶಿವರಾಜ್ ಕುಮಾರ್ ಹೆಚ್ಚಿನ ಚಿಕಿತ್ಸೆಗಾಗಿ ಹೊರದೇಶಕ್ಕೆ ಹೊರಡಲಿದ್ದಾರೆ. ಇದಕ್ಕೂ ಮುನ್ನ ಚಿಕಿತ್ಸೆ ಫಲಕಾರಿಯಾಗಲೆಂದು ಸ್ಥಳೀಯ ಹಾಗೂ ಜಿಲ್ಲೆ ಅನೇಕ ದೇವಾಲಯಗಳಿಗೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದರು.

RELATED ARTICLES
- Advertisment -
Google search engine

Most Popular