Saturday, April 19, 2025
Google search engine

Homeರಾಜ್ಯಸುದ್ದಿಜಾಲಖಳನಾಯಕನ ಪಾತ್ರಕ್ಕೆ ಹೊಸ ಅರ್ಥ , ಜೀವಂತಿಕೆಯನ್ನು ಹೆಚ್ಚಿಸಿದ ನಟ ವಜ್ರಮುನಿ:ಸುರೇಶ್ ಎನ್...

ಖಳನಾಯಕನ ಪಾತ್ರಕ್ಕೆ ಹೊಸ ಅರ್ಥ , ಜೀವಂತಿಕೆಯನ್ನು ಹೆಚ್ಚಿಸಿದ ನಟ ವಜ್ರಮುನಿ:ಸುರೇಶ್ ಎನ್ ಋಗ್ವೇದಿ ಬಣ್ಣನೆ

ಚಾಮರಾಜನಗರ: ಕನ್ನಡ ಚಲನಚಿತ್ರ ರಂಗದ ಡಾ. ರಾಜಕುಮಾರ್ ಜೊತೆ ಸರಿಸಮಾನವಾಗಿ ಖಳನಾಯಕನ ಪಾತ್ರವನ್ನು ನಿರ್ವಹಿಸಿ ಜೀವಂತಿಕೆ ತುಂಬಿದ ಅದ್ಭುತ ನಟ ವಜ್ರಮುನಿಯವರು ಎಂದು ಸಂಸ್ಕೃತಿ ಚಿಂತಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ತಾ ಕನ್ನಡ ಸಾಹಿತ್ಯ ಪರಿಷತ್ ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಟಭೈರವ ವಜ್ರಮುನಿ ರವರ ಕೊಡುಗೆಗಳು ಕುರಿತು ಮಾತನಾಡುತ್ತ ಕನ್ನಡ ಚಲನಚಿತ್ರರಂಗದಲ್ಲಿ ಮರೆಯಲಾಗದ ನಟಭಯಂಕರ. ತಮ್ಮ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿ ಪಾತ್ರವನ್ನು ಅಭಿನಯಿಸಿ ಕೋಟ್ಯಾಂತರ ಕನ್ನಡಿಗರ ಮನದಲ್ಲಿ ರಾರಾಜಿಸುತ್ತಿರುವ ನಟ ವಜ್ರಮುನಿ ರವರು. ಖಳನಾಯಕನ ಪಾತ್ರಕ್ಕೆ ಹೊಸ ಅರ್ಥವನ್ನು ನೀಡಿದ ಹಾಗೂ ಪಾತ್ರಗಳ ಜೀವಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದ ನಟರು ವಜ್ರಮುನಿ ಎಂದು ಬಣ್ಣಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಬರಹಗಾರ ಎಸ್ ಲಕ್ಷ್ಮೀನರಸಿಂಹರವರು ಖಳನಾಯಕ ಪಾತ್ರವನ್ನು ನಿರ್ವಹಿಸಿ ರಾಜಕುಮಾರಂತೆಯೇ ಶ್ರೇಷ್ಠ ನಟರಾಗಿ ಹೊರಹೊಮ್ಮಿ ಕನ್ನಡ ಚಲನಚಿತ್ರ ರಂಗಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ ವಜ್ರಮು ನಿಯವರು ಶ್ರೀನಿವಾಸ ಕಲ್ಯಾಣದ ಬೃಗು ಮಹರ್ಷಿ, ಸಂಪತ್ತಿಗೆ ಸವಾಲ್ ಸಿದ್ದಪ್ಪ, ಮೂರುವರೆ ವಜ್ರದ ದುರ್ಯೋಧನ, ಮಯೂರ ಚಲನಚಿತ್ರದ ವಿಷ್ಣು ಗೋಪ, ಗಿರಿಕನ್ಯೆ ಕೇಶವ ಪಾತ್ರ ,ರಾವಣನ ಪಾತ್ರ ಮರೆಯಲಾಗದು.

ವಜ್ರಮುನಿಯವರ ಬಗ್ಗೆ ಶಾಸನಸಭೆಯಲ್ಲಿ ಕನ್ನಡ ಹೋರಾಟಗಾರರಾದ ಮಾಜಿ ಶಾಸಕರಾದ ವಾಟಾಳ್ ನಾಗರಾಜ್ ರವರು ಒಂದು ಗಂಟೆಗೂ ಹೆಚ್ಚು ಕಾಲ ವಜ್ರಮುನಿಯವರ ಕೊಡುಗೆಯ ಬಗ್ಗೆ ಮಾತನಾಡಿರುವುದು ಅವರ ಪಾತ್ರ ಎಷ್ಟು ಮಹತ್ವದಿಂದ ಕೂಡಿತ್ತು ಎಂಬುದರ ಬಗ್ಗೆ ನಮಗೆ ಅರಿವಾಗಿರುತ್ತದೆ. ಚಲನಚಿತ್ರದಲ್ಲಿ ಖಳನಾಯಕನಾಗಿದ್ದು ಜೀವನದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಬದುಕಿ ಬಾಳಿದವರು. ವಜ್ರಮುನಿ ಯಂತಹ ನಟರ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ರೂಪಿಸಿರುವುದು ಬಹಳ ಮೆಚ್ಚುಗೆಯಾದದ್ದು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಋಗ್ವೇದಿ ಯವರು ಕನ್ನಡ ಚಲನಚಿತ್ರ ರಂಗದ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ದುಡಿದ ಮರೆತು ಹೋದ ಮಹಾನ್ ವ್ಯಕ್ತಿಗಳ ಬಗ್ಗೆ ಕಾರ್ಯಕ್ರಮ ರೂಪಿಸಿ ಅವರ ವ್ಯಕ್ತಿತ್ವ , ಕೊಡುಗೆಗಳ ಚಿಂತನೆಯ ಕಾರ್ಯ ಯೋಜನೆ ರೂಪಿಸಿರುವುದು ಅಭಿನಂದನಾರ್ಹ ಎಂದರು.

ಕನ್ನಡ ಹೋರಾಟಗಾರರಾದ ಶ್ರೀನಿವಾಸ ಗೌಡ ಮಾತನಾಡಿ ವಜ್ರಮುನಿಯವರು ಶ್ರೀಮಂತಿಕೆಯ ಕುಟುಂಬದಲ್ಲಿ ಜನಿಸಿದವರು. ಕಲೆಯ ಆರಾಧಕರಾಗಿ ಖಳನಾಯಕ ಪಾತ್ರಗಳಲ್ಲಿ ನಟಿಸಿ ಕನ್ನಡ ಚಲನಚಿತ್ರ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾಯಕನಟನಷ್ಟೇ ಸರಿಸಮಾನವಾದ ಗೌರವ ಪಡೆಯಿದ್ದ ವಜ್ರಮುನಿಯವರು ಇಂದಿಗೂ ಜನರಲ್ಲಿ ನೆಲೆಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಸಿಎಂ ವೆಂಕಟೇಶ್ ಮಾತನಾಡಿ ವಜ್ರಮುನಿಯವರ ಚಲನಚಿತ್ರರಂಗದ ವಿವಿಧ ಪಾತ್ರಗಳು ಅವರ ಧ್ವನಿ, ನಟನೆ, ಇಂದಿಗೂ ನಮಗೆ ಆಶ್ಚರ್ಯವನ್ನು ಉಂಟುಮಾಡುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ರವಿಚಂದ್ರಪ್ರಸಾದ್ ಮಾತನಾಡಿ ವಜ್ರಮುನಿ ಅವರು ಚಾಮರಾಜನಗರಕ್ಕೆ ಭೇಟಿ ನೀಡಿ ಕಲೆಯನ್ನು ಪ್ರೋತ್ಸಾಹಿಸಿದ ಘಟನೆಗಳನ್ನು ಮೆಲುಕು ಹಾಕಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಿ ಕೆ ಆರಾಧ್ಯ, ಸರಸ್ವತಿ ,ಶಿವಲಿಂಗ ಮೂರ್ತಿ , ಕನ್ನಡ ಹೋರಾಟಗಾರ ಪಣ್ಯದಹುಂಡಿರಾಜು, ಬಂಡಿಗೆರೆ ಸಿದ್ದೇಶ್, ಸುಮುಖ ಇದ್ದರು.

RELATED ARTICLES
- Advertisment -
Google search engine

Most Popular