ಮಂಡ್ಯ: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅಸ್ಥಿವಿಸರ್ಜನೆಗೆ ಶ್ರೀರಂಗಪಟ್ಟಣದ ಕಾವೇರಿ ನದಿ ತಟದ ಸ್ನಾನ ಘಟ್ಟದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ವೈದಿಕ ಅರ್ಚಕ ರಾಕೇಶ್ ಶರ್ಮಾ ನೇತೃತ್ವದಲ್ಲಿ ವೈದಿಕ ಕ್ರಿಯಾ ಕರ್ಮದ ಪೂಜಾ ಕೈಂಕರ್ಯ ನೆರವೇರಲಿದೆ.
ಪಟ್ಟಣದ ಸ್ನಾನಘಟ್ಟದ ಗೌತಮ ಮಂಟಪದಲ್ಲಿ ವೈದಿಕ ಕಾರ್ಯ ನಡೆಯಲಿದ್ದು, ಸ್ಪಂದನ ಪುತ್ರ ಶೌರ್ಯರಿಂದ ವೈದಿಕ ಪೂಜಾ ಕಾರ್ಯಕ್ರಮ ನೆರವೇರಲಿದೆ.
ಮಧ್ಯಾಹ್ನ 12 ಗಂಟೆಗೆ ಅಸ್ಥಿ ವಿಸರ್ಜನೆಗೆ ವಿಜಯ ರಾಘವೇಂದ್ರ ಕುಟುಂಬಸ್ಥರು ಆಗಮಿಸಲಿದ್ದಾರೆ.