ಚನ್ನಪಟ್ಟಣ: ನಟಿ, ನಿರೂಪಕಿ ಅಪರ್ಣ ಅವರ ನಿಧನ ಕನ್ನಡ ನಾಡಿಗೆ ತುಂಬಲಾರದ ನಿಷ್ಟವಾಗಿದೆ ಎಂದು ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ವಿಷಾಧಿಸಿದರು.
ಅಪರ್ಣ ಅವರ ನಿಧನಕ್ಕೆ ವೇದಿಕೆಯಿಂದ ಶ್ರದ್ದಾಂಜಲಿ ಅರ್ಪಿಸಿ ಅವರು ಮಾತನಾಡಿ, ರಾಜ್ಯದಲ್ಲಿ ಸ್ಪಷ್ಟವಾಗಿ ಕನ್ನಡ ಭಾಷೆಯನ್ನು ಮಾತನಾಡುವ ನೂರು ಮಂದಿಯಲ್ಲಿ ಅಪರ್ಣ ಅವರು ಎರನೇ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು, ಡಾ. ರಾಜ್‌ಕುಮಾರ್‌ಅವರ ಕನ್ನಡ ಭಾಷೆಗೆ ತಮ್ಮನ್ನು ಮುಡಿಪಾಗಿಟ್ಟಂತೆ ಅಪರ್ಣ ಅವರು ಕನ್ನಡ ಭಾಷೆಗೆ ತಮ್ಮನ್ನು ಅರ್ಪಣೆ ಮಾಡಿಕೊಂಡಿದ್ದರು. ಆಕಾಶವಾಣಿಯಲ್ಲಿ ನಿರೂಪಕಿಯಾಗಿ (ರೇಡಿಯೋ ಜಾಕಿ), ನಟಿಯಾಗಿ, ಚಂದನದ ವಾರ್ತಾ ವಾಚಕರಾಗಿ, ಗಾಯಕಿಯಾಗಿ, ಸರ್ಕಾರಿ ಮತ್ತು ಖಾಸಗಿ ಸಮಾರಂಭಗಳ ನಿರೂಪಣೆಯಲ್ಲಿ ಕನ್ನಡ ಭಾಷೆಯನ್ನು ನರರ್ಗಳವಾಗಿ ಮಾತನಾಡಿ, ರಾಜ್ಯದ ಜನತೆಯ ಮನಸ್ಸನ್ನು ಸೆಳೆಸಿದ್ದರು. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ನಿಂಗೇಗೌಡರು ಮಾತನಾಡಿ, ಅಪರ್ಣ ಅವರು ಕನ್ನಡ ಭಾಷೆಯಲ್ಲಿ ಎಲ್ಲೂ ತಡವರಿಸದಂತೆ ಆಂಗ್ಲ ಭಾಷೆಯ ಒಂದಕ್ಷರವನ್ನು ಸೇರಿಸದೆ ಕನ್ನಡ ಉಚ್ಚರಣೆ ಮಾಡುತ್ತಿದ್ದರು. ಜೊತೆಗೆ ಮಜಾ ಟಾಕೀಸ್‌ನ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಾಗಿ ತಮ್ಮದೇ ಚಾಪು ಮೂಡಿಸಿದ್ದರು. ಸರ್ಕಾರಿ ಸಮಾರಂಭಗಳಲ್ಲಿ ಅವರ ನಿರೂಪಣೆ ಕಾರ್ಯಕ್ರಮಕೆ ಮೆರಗು ನೀಡುತ್ತಿತ್ತು ಅವರ ಅಗಲಿಕೆ ಕರುನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ವಿಷಾಧಿಸಿದರು.
ಸಂರ್ಭದಲ್ಲಿ ವೇದಿಕೆಯಿಂದ ಅರ್ಪಣ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ವೇದಿಕೆ ರಾಜ್ಯ ಉಪಾಧ್ಯಕ್ಷ ರಂಜಿತ್‌ಗೌಡ, ಚಿಕ್ಕಣಪ್ಪ. ಪುನೀತ್, ಆಟೋ ವೆಂಕಟೇಶ್, ರ್‍ಯಾಂಬೋ ಸೂರಿ, ಆರ್.ಶಂಕರ್, ಆಟೋ ಮನು, ರಾಜು ಇದ್ದರು.