ದಕ್ಷಿಣ ಚಿತ್ರರಂಗದ ಬೇಡಿಕೆಯ ನಟಿ ಸಮಂತಾ ರುತ್ ಪ್ರಭು ಕಳೆದ ಏಳು ತಿಂಗಳಿನಿಂದ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ೨೦೨೩ರ ಜುಲೈನಲ್ಲಿ ಕುಶಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ ಬಳಿಕ ತಮ್ಮ ಆರೋಗ್ಯದ ಕಡೆ ಗಮನಹರಿಸಲು ಸಿನಿಮಾಗಳಿಂದ ವಿರಾಮ ಪಡೆದಿದ್ದರು. ಉತ್ತಮ ಆರೋಗ್ಯಕ್ಕಾಗಿ ಸಮಯ ಮೀಸಲಿಟ್ಟ ಬಳಿಕ ಇದೀಗ ತಮ್ಮ ಕೆಲಸಕ್ಕೆ ಮರಳಲು ಸಿದ್ಧರಾದಂತೆ ತೋರುತ್ತಿದೆ.
ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಸಿನಿ ವೃತ್ತಿಜೀವನಕ್ಕೆ ಮರಳುವ ಕುರಿತು ಮಾತನಾಡಿರುವ ಸಣ್ಣ ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದಾರೆ. ಸಂಪೂರ್ಣವಾಗಿ ನಿರುದ್ಯೋಗಿಯಾಗಿದ್ದೆ ಎಂಬುದನ್ನು ನಟಿ ಹಾಸ್ಯಮಯವಾಗಿ ಒಪ್ಪಿಕೊಂಡಿದ್ದಾರೆ. ಕಮ್? ಬ್ಯಾಕ್?? ಮಾಡುವ ಬಗ್ಗೆ ಘೋಷಿಸುವುದರ ಜೊತೆಗೆ, ತಮ್ಮ ಸ್ನೇಹಿತರೊಂದಿಗೆ ಹೆಲ್ತ್ ಪಾಡ್‌ಕಾಸ್ಟ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಬಹಿರಂಗಪಡಿಸಿದರು. ಈ ಕಾರ್ಯಕ್ರಮ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.