Wednesday, August 6, 2025
Google search engine

Homeಅಪರಾಧಕಾನೂನುದರ್ಶನ್ ರೌಡಿ ಆಗ್ಬೇಕಿತ್ತು ಎಂದ ನಟಿ ಸೋನು ಶೆಟ್ಟಿ : ಡಿ ಬಾಸ್ ಫ್ಯಾನ್ಸ್ ಗಳಿಂದ...

ದರ್ಶನ್ ರೌಡಿ ಆಗ್ಬೇಕಿತ್ತು ಎಂದ ನಟಿ ಸೋನು ಶೆಟ್ಟಿ : ಡಿ ಬಾಸ್ ಫ್ಯಾನ್ಸ್ ಗಳಿಂದ ಮತ್ತೆ ಅಶ್ಲೀಲ ಮೆಸೇಜ್

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದ್ವನಿ ಎತ್ತಿದ್ದ ನಟಿ ರಮ್ಯಾಗೆ ನಟ ದರ್ಶನ್ ಫ್ಯಾನ್ಸ್ ಬೆದರಿಕೆ ಹಾಕಿದ್ದರು. ಈ ಹಿನ್ನಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿಗೂ ಕೂಡ ಫ್ಯಾನ್ಸ್  ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಟ ದರ್ಶನ್ ಗೆ ಛೀಮಾರಿ ಹಾಕಿತ್ತು. ಈ ಬಗ್ಗೆ ನಟಿ ರಮ್ಯಾ ದ್ವನಿ ಎತ್ತಿದ್ದರು. ಇದಕ್ಕೆ ಅನೇಕ ಸೆಲೆಬ್ರಿಟಿಗಳು ಬೆಂಬಲ ಸೂಚಿಸಿದ್ದರು. ಅದರಂತೆ ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿ ಎಂಬುವವರು ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ಮಾತಾಡಿದ್ದಾರೆ.

ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸೋನು ಶೆಟ್ಟಿ, ಡಿ ಬಾಸ್ ಎಂದು ಹೇಳುವವರಾಗಲಿ, ಅವರ ಅಭಿಮಾನಿಗಳಾಗಲಿ ನನಗೆ ಸ್ವಲ್ಪವೂ ಇಷ್ಟವಾಗಲ್ಲ..  ದರ್ಶನ್ ರೌಡಿ ಆಗಬೇಕಿತ್ತು, ಅಪ್ಪಿ ತಪ್ಪಿ ಹೀರೋ ಆಗಿದ್ದಾರೆ ಅದೇ ದೊಡ್ಡ ಸಮಸ್ಯೆ ಆಗಿದೆ ಎಂದು ಹೇಳಿದರು.

ಅಷ್ಟೇ ಅಲ್ಲದೆ ಅವರು ರೌಡಿ ತರ ಇರೋದಕ್ಕೆ ಅವರ ಅಭಿಮಾನಿಗಳು ಕೂಡ ಹಾಗೇ ಇದ್ದಾರೆ. ಮೊದಲು ಅವರ ಫ್ಯಾನ್ಸ್ ಗೆ ಬುದ್ದಿ ಕಲಿಸಬೇಕು ಅದಾದ ಬಳಿಕ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟ ದರ್ಶನ್ ಅಭಿಮಾನಿಗಳು ಕಾಮೆಂಟ್ ನಲ್ಲಿ ಹಾಗೂ ಮೆಸ್ಸೇಜ್ ಮಾಡಿ ಅಶ್ಲೀಲ ಮೆಸ್ಸೇಜ್ ಹಾಗೂ ಕಾಮೆಂಟ್ ಮಾಡುತ್ತಿದ್ದು, ವಿಡಿಯೋ ಡಿಲಿಟ್ ಮಾಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. 

RELATED ARTICLES
- Advertisment -
Google search engine

Most Popular