Sunday, April 20, 2025
Google search engine

Homeರಾಜ್ಯಸುದ್ದಿಜಾಲಅಡಗೂರು ಹೆಚ್. ವಿಶ್ವನಾಥ್ ರಾಜಕೀಯದಿಂದ ಸಾಹಿತ್ಯದವರೆಗೆ ಸೇವೆಯ ಸಂಜೀವಿನಿ-ಸಾ. ರಾ.ಮಹೇಶ್

ಅಡಗೂರು ಹೆಚ್. ವಿಶ್ವನಾಥ್ ರಾಜಕೀಯದಿಂದ ಸಾಹಿತ್ಯದವರೆಗೆ ಸೇವೆಯ ಸಂಜೀವಿನಿ-ಸಾ. ರಾ.ಮಹೇಶ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ ಆರ್. ನಗರ: ರಾಜಕೀಯ ಕ್ಷೇತ್ರವಲ್ಲದೆ ಸಾಹಿತ್ಯ ಕಲೆ ಸಂಸ್ಕೃತ ಕ್ಷೇತ್ರದಲ್ಲಿಯೂ ಅಪಾರ ಸೇವೆ ಸಲ್ಲಿಸಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುವ ಮಾಜಿ ಸಚಿವ ವಿಧಾನಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಮತ್ತು ಪತ್ನಿ ಶಾಂತಮ್ಮ ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಮಾಜಿ ಸಚಿವ ಸಾ. ರಾ.ಮಹೇಶ್ ಹೇಳಿದರು.

ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಮುಂಭಾಗ ಹೆಚ್ ವಿಶ್ವನಾಥ್ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಏರ್ಪಡಿಸಿದ್ದ ಅಡಗೂರು ಹೆಚ್ ವಿಶ್ವನಾಥ್ ಅವರ 50ನೇ ವರ್ಷ ದ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದಂಪತಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಎಚ್ ವಿಶ್ವನಾಥ್ ಅವರು ಆಡುಮುಟ್ಟಿದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ವೈವಿಧ್ಯಮಯದಲ್ಲಿ ಸೇವೆ ಸಲ್ಲಿಸಿ ಅಲ್ಲಿ ಅವರದೇ ಆದ ಛಾಪು ಮೂಡಿಸಿದ್ದಾರೆ ಎಂದರು.

ಎಚ್ ವಿಶ್ವನಾಥ್ ಅವರು ವಕೀಲರಾಗಿ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ ಅಧ್ಯಕ್ಷರಾಗಿ ಶಾಸಕರಾಗಿ ಸಚಿವರಾಗಿ ಸಂಸತ್ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯರಾಗಿ ಲೇಖಕರಾಗಿ ಕಲಾವಿದರಾಗಿ ಕವಿಯಾಗಿ ಅವರು ಮಾಡಿದ ಸಾಧನೆಯು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ಈಗಿನ ಯುವಕರು ಪಾಲಿಸಬೇಕೆಂದು ತಿಳಿಸಿದರು.

ತಮ್ಮ ಅಧಿಕಾರ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆ ಆರೋಗ್ಯಕ್ಕಾಗಿ ಯಶಸ್ವಿನಿ ಸಮುದಾಯದತ್ತ ಶಾಲೆ ಮಹಿಳಾ ಸಂಘಗಳ ಸ್ಥಾಪನೆ ಸೇರಿದಂತೆ 10 ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಇಂದಿಗೂ ಜನಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ತಿಳಿಸಿದರು.

ಇಂತಹ ಜನಪ್ರಿಯ ನಾಯಕನಿಗೆ ಸಹಾಯಕ್ಕಾಗಿ ಮತ್ತು ಸಹಕಾರ ನೀಡಿದ ಅವರ ಶ್ರೀಮತಿ ಶಾಂತಮ್ಮ ಅವರನ್ನು ಸಹ ನಾವು ಮರೆಯುವಂತಿಲ್ಲ ಎಚ್ ವಿಶ್ವನಾಥ್ ಅವರು ಏನೇ ಮಾಡಿದರು ಯಾವುದೇ ಸಂದರ್ಭದಲ್ಲಿಯೂ ವಿರೋಧ ಮಾಡದೆ ಪ್ರೋತ್ಸಾಹ ನೀಡಿದ ಅವರ ಗುಣ ಪ್ರತಿಯೊಬ್ಬ ಹೆಣ್ಣು ಮಕ್ಕಳ ಪಾಲಿಸಬೇಕಾಗಿದೆ ಎಂದು ತಿಳಿಸಿದ ಮಾಜಿ ಸಚಿವರು ಇವರ ದಾಂಪತ್ಯ ಜೀವನ ಇನ್ನೂ ಹೆಚ್ಚು ಕಾಲ ಹೀಗೆ ಇದ್ದು ಜನಸೇವೆ ಮಾಡುವಂತಾಗಲಿ ಎಂದು ತಿಳಿಸಿದರು.

ಇದಕ್ಕೂ ಮೊದಲು ಸಾಗರೋಪಾದಿಯಲ್ಲಿ ಬಂದ ಸಾವಿರಾರು ಜನ ಅಭಿಮಾನಿಗಳು ಹಿತೈಷಿಗಳು ಹಾರಾ ತುರಾಯಿಗಳನ್ನು ಹಾಕುವ ಮೂಲಕ ದಂಪತಿಗಳಿಬ್ಬರಿಗು ಶುಭಾಶಯ ಕೋರಿದಲ್ಲದೆ ಚಂದ್ರ ಮೌಳೇಶ್ವರಿ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ನಾಯಕನ ಯಶಸ್ವಿ ಹಾಧಿ ಇದೆ ರೀತಿ ಮುಂದೆ ಸಾಗಲಿ ಎಂದು ಕೋರಿದರು.

ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಕೆ ಎನ್ ಬಸಂತ್, ಪುರಸಭಾ ಅಧ್ಯಕ್ಷ ಶಿವು ನಾಯಕ್, ಪುರಸಭಾ ಸದಸ್ಯರಾದ ನಟರಾಜ್, ಕೆಪಿ ಪ್ರಭುಶಂಕರ್, ಕೆಎಲ್ ಜಗದೀಶ್, ಸಂತೋಷ್ ಗೌಡ, ಉಮೇಶ್, ಡಾ. ಮೆಹಬೂಬ್ ಖಾನ್, ಜೆಡಿಎಸ್ ಅಧ್ಯಕ್ಷರಾದ ಎಚ್ ಸಿ ಕುಮಾರ್ ಮೆಡಿಕಲ್ ರಾಜಣ್ಣ ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್ ಜಿ. ಪಂ. ಮಾಜಿ ಅಧ್ಯಕ್ಷ ಸಿದ್ದಪ್ಪ ಸಾ.ರಾ .ನಂದೀಶ್, ಅಮಿತ್ ವಿ ದೇವರಟ್ಟಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈಎಸ್ ಕುಮಾರ್ ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ ಸೇರಿದಂತೆ ಸಾವಿರಾರು ಅಭಿಮಾನಿಗಳು ವಿವಿದ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಶನಿವಾರ ಸಂಜೆ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಂ, ಉಪಾಧ್ಯಕ್ಷ ಹೊಸೂರು ಕುಚೇಲ್, ಪ್ರಧಾನ ಕಾರ್ಯದರ್ಶಿ ರಾಮಲಿಂಗು, ನಿರ್ದೇಶಕರಾದ ಹೆಬ್ಬಾಳು ಶಿವಪ್ಪ, ತೋಟದ ಮಂಜು,ದೇವೆಂದ್ರ, ಹೊಸೂರು ಗೋಪಾಲ್, ಮುಖಂಡರಾದ ಎಸ್.ಪಿ.ತಮ್ಮಯ್ಯ, ಹೊಸಳ್ಳಿ ವೆಂಕಟೇಶ್, ವಕೀಲ ತಿಮ್ಮೇಗೌಡ, ಕೇಶವ್, ರೈತ ಸಂಘದ ರವೀಂದ್ರ ಸೇರಿದಂತೆ ಮತ್ತಿತರರು ಒಕ್ಕಲಿಗರ ಸಂಘದ ಪರವಾಗಿ ಅಭಿನಂಧಿಸಿದರು

RELATED ARTICLES
- Advertisment -
Google search engine

Most Popular