Monday, April 21, 2025
Google search engine

Homeರಾಜಕೀಯಕನಕಪುರ ಬೆಂಗಳೂರಿಗೆ ಸೇರಿಸುವ ವಿಚಾರ: ನನ್ನ ಜೊತೆ ಯಾರೂ ಚರ್ಚಿಸಿಲ್ಲ ಸಿಎಂ ಸಿದ್ದರಾಮಯ್ಯ

ಕನಕಪುರ ಬೆಂಗಳೂರಿಗೆ ಸೇರಿಸುವ ವಿಚಾರ: ನನ್ನ ಜೊತೆ ಯಾರೂ ಚರ್ಚಿಸಿಲ್ಲ ಸಿಎಂ ಸಿದ್ದರಾಮಯ್ಯ

ಉಡುಪಿ: ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರ ಈ ಬಗ್ಗೆ ನನ್ನ ಜೊತೆ ಯಾರೂ ಚರ್ಚೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಉಡುಪಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಂಟ ಸಮಾವೇಶದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕನಕಪುರ ಸೇರಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಿಲ್ಲ ಎಂದರು.

ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ೫೦ ಕೋಟಿ ಆಫರ್ ವಿಚಾರವಾಗಿ ಮಾತನಾಡಿದ ಸಿಎಂ ಆ ವಿಚಾರವನ್ನು ರವಿ ಗಾಣಿಗ ಬಳಿಯೇ ಕೇಳಿ, ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿರುವುದು ನಿಜ. ಬಿಜೆಪಿಯವರು ಈ ಪ್ರಯತ್ನದಲ್ಲಿ ಸಫಲ ಆಗಲ್ಲ. ಅವರು ಹಗಲುಗನಸು ಕಾಣುತ್ತಿದ್ದಾರೆ. ಒಮ್ಮೆ ಆಪರೇಷನ್ ಕಮಲ ಮಾಡಿ ಸಕ್ಸಸ್ ಆಗಿರಬಹುದು. ಆದರೆ, ಯಾವಾಗಲೂ ಹಾಗೆ ಆಗಲ್ಲ, ವಿಫಲ ಪ್ರಯತ್ನ ಎಂದರು. ಬಿಜೆಪಿಯವರು ಅಧಿಕಾರಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆ. ನಮ್ಮ ಪಕ್ಷದ ಒಬ್ಬ ಶಾಸಕನೂ ಅವರ ಆಮಿಷಕ್ಕೆ ಒಳಗಾಗಲ್ಲ ಎಂದರು ಹೇಳಿದರು.

ವಿಶ್ವ ಬಂಟ ಸಮಾವೇಶದಲ್ಲಿ ಮಾತನಾಡಿದ ಅವರು ಜಗತ್ತಿನ ಅನೇಕ ಪ್ರದೇಶಗಳಿಗೆ ಬಂಟರು ವಿಸ್ತರಿಸಿದ್ದು, ಉದ್ಯೋಗ ಹಾಗೂ ಉದ್ದಿಮೆ ಅರಸುತ್ತಾ ಸರ್ವವ್ಯಾಪಿಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಇಂದು (ಅ.೨೮) ಉಡುಪಿಯಲ್ಲಿ ಹಮ್ಮಿಕೊಂಡಿದ್ದ ವಿಶಿಷ್ಟ ಸಂಸ್ಕೃತಿ ಪರಂಪರೆ ಇರುವ ಸಮುದಾಯ ಬಂಟರದ್ದು, ರಾಜಕೀಯ ಕ್ರೀಡೆ, ಸಿನೆಮಾ ಉದ್ಯಮದಲ್ಲಿ ಬಂಟರ ಛಾಪು ಇದೆ ಎಂದರು.

ಸಮಾವೇಶದಲ್ಲಿ ಬಂಟರ ಅಭಿವೃದ್ಧಿ , ಸಂಘಟನೆ ಬಗ್ಗೆ ಚರ್ಚೆ ಮಾಡಿ. ನಿಮ್ಮ ಸಂಸ್ಕೃತಿ ಬೇರೆಯವರು ಕೂಡ ಅಳವಡಿಸುವಂತಾಗಲಿ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಂಟರ ಅಭಿವೃದ್ಧಿ ನಿಗಮ ಇತ್ತು. ಮುಂದಿನ ಬಜೆಟ್ ಮಂಡಿಸುವಾಗ ಬಂಟ ನಿಗಮ ಘೋಷಣೆ ಮಾಡುತ್ತೇನೆ. ಬಂಟರ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು.

RELATED ARTICLES
- Advertisment -
Google search engine

Most Popular